ಪುಣ್ಯದ ಲೆಕ್ಕವನ್ನು ಮೇಲಿರುವವನಿಗೆ ಮಾತ್ರ ಕೊಡಬೇಕು: ನಟ ದರ್ಶನ್ - ಚಾಲೆಂಜಿಂಗ್ ಸ್ಟಾರ್ ದರ್ಶನ್
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ. ಅಭಿಮಾನಿ ದೇವರುಗಳ ಜೊತೆ ದಾಸ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ಅವರ ಮಾತಿಗೆ ಬೆಲೆಕೊಟ್ಟು ಟನ್ ಗಟ್ಟಲೆ ದವಸ ಧಾನ್ಯವನ್ನು ತಂದುಕೊಟ್ಟಿದ್ದಾರೆ. ಇದಕ್ಕೆ ಸಂತಸ ವ್ಯಕ್ತಪಡಿಸಿರುವ ದರ್ಶನ್ ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ. ಅವರು ತಂದುಕೊಟ್ಟಿರುವ ದವಸಧಾನ್ಯಗಳನ್ನು ಅನಾಥಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆಂದು ಹೇಳಿದ್ರು.