ಕರ್ನಾಟಕ

karnataka

ETV Bharat / videos

‘ಮದಗಜ’ನ ಡೈಲಾಗ್​ಗೆ ಫಿದಾ ಆದ ಅಭಿಮಾನಿಗಳು - Kannada new movie news

By

Published : Oct 4, 2020, 6:11 PM IST

ಚಾಮರಾಜನಗರ : ಮದಗಜ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ನಟ ಶ್ರೀಮುರುಳಿ‌ ಅವರನ್ನು ನೋಡಲು 2ನೇ ದಿನವೂ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ರಸ್ತೆಯಲ್ಲಿ ಹಾಸ್ಯನಟ ಚಿಕ್ಕಣ್ಣ ಅವರೊಂದಿಗೆ ಶೂಟಿಂಗ್ ಮುಗಿಸಿದ ಬಳಿಕ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಬೇಡಿಕೆಗೆ‌ ಮಣಿದು ಖಡಕ್ ಡೈಲಾಗ್​ಗಳನ್ನು ಹೇಳಿ ರಂಜಿಸಿದರು ಶ್ರೀಮುರಳಿ. ಶನಿವಾರ ಜಗಪತಿಬಾಬು ಅವರೊಂದಿಗೆ ಚೇಸಿಂಗ್ ಸನ್ನಿವೇಶದ ಚಿತ್ರೀಕರಣ ಹಂಗಳ ಗ್ರಾಮದಲ್ಲಿ ನಡೆದಿತ್ತು. ‌ಮಹೇಶ್‌ಕುಮಾರ್ ನಿರ್ದೇಶನದ ಉಮಾಪತಿ ಬ್ಯಾನರ್​​ನಲ್ಲಿ ಮದಗಜ ಚಿತ್ರ ನಿರ್ಮಾಣವಾಗುತ್ತಿದೆ.

ABOUT THE AUTHOR

...view details