ಹಲಾಲ್ ಅಂಗಡಿಯಲ್ಲಿ ಮಾಂಸ ಖರೀದಿ ಬೇಡ: ಸಿದ್ಧಲಿಂಗ ಸ್ವಾಮೀಜಿ
ಕಲಬುರಗಿ: ಹಿಂದೂಗಳು ಯಾವುದೇ ಕಾರಣಕ್ಕೂ ಮುಸ್ಲಿಮರ ಹಲಾಲ್ ಅಂಗಡಿಯಲ್ಲಿ ಮಾಂಸ ಖರೀದಿಸಬಾರದು. ಹಲಾಲ್ ಅಂಗಡಿಯಲ್ಲಿ ಮಾಂಸ ಖರೀದಿಸಿದರೆ ಹಿಂದೂ ವಿರೋಧಿಗಳ ಕೈ ಬಲಪಡಿಸಿದಂತಾಗುತ್ತದೆ. ಇದು ದೇಶಕ್ಕೆ ದ್ರೋಹ ಬಗೆದಂತೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಕಲಬುರಗಿಯಲ್ಲಿ ಮಾತನಾಡಿದ ಅವರು, ಹಲಾಲ್ ವಿರುದ್ಧ ಹಿಂದೂ ಸಂಘಟನೆಗಳ ಹೋರಾಟ ಸ್ವಾಗತಾರ್ಹ. ಮುಸ್ಲಿಂ ವ್ಯಕ್ತಿ ಚೂರಿ ಹಾಕಿದ ಮಾಂಸ ಮುಸ್ಲಿಮರಿಗೆ ಮಾತ್ರ ಶ್ರೇಷ್ಠವಾಗುತ್ತದೆ. ಅದು ಹಿಂದೂಗಳಿಗೆ ಎಂಜಲಾಗುತ್ತದೆ ಎಂಬ ಹಿಂದೂ ಸಂಘಟನೆಗಳ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದ್ದಾರೆ.
Last Updated : Feb 3, 2023, 8:21 PM IST
TAGGED:
ಸಿದ್ದಲಿಂಗ ಸ್ವಾಮೀಜಿ ಹೇಳಿಕೆ