ಮೃತ ನವೀನ್ ಮನೆಗೆ ರಾಜಕಾರಣಿಗಳ ಭೇಟಿ: ಪೋಷಕರಿಗೆ ಸಾಂತ್ವನ
ಹಾವೇರಿ: ಉಕ್ರೇನ್ನ ಖಾರ್ಕೀವ್ನಲ್ಲಿ ಜಿಲ್ಲೆಯ ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಅಸುನೀಗಿದ್ದು, ಅವರ ಗ್ರಾಮಕ್ಕೆ ರಾಜಕಾಣಿಗಳು ಬಂದು ಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕಾರ್ಮಿಕ ಸಚಿವ ಶಿವರಾಜ್ ಹೆಬ್ಬಾರ್ ಅವರು ಈ ಬಗ್ಗೆ ಮಾತನಾಡಿದ್ದು, ಇದು ದುಃಖಕರ ವಿಷಯ. ಅವರ ಪೋಷಕರಿಗೆ ದುಃಖ ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದರು. ಹಾಗೆ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಈ ಘಟನೆಯಿಂದ ತುಂಬಾ ನೋವಾಗಿದೆ. ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳನ್ನು ಅಲ್ಲಿಂದ ಶೀಘ್ರ ಕರೆತರುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
Last Updated : Feb 3, 2023, 8:18 PM IST