ಆನೆ ಜೊತೆ ಫೋಟೋ ತೆಗೆದುಕೊಳ್ಳಲು ಹೋದ ಯುವಕ... ಒಂಟಿ ಸಲಗದ ದಾಳಿಯಿಂದ ಜಸ್ಟ್ ಮಿಸ್!! - ತರಕಾರಿ ಹಾಗೂ ಕಬ್ಬು ತುಂಬಿದ ಲಾರಿಗಳ ಸಂಚಾರ
ಚಾಮರಾಜನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಆನೆ ಜೊತೆ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಸ್ವಲ್ಪದರಲ್ಲೇ ಬಚಾವಾದ ಘಟನೆ ಚಾಮರಾಜನಗರ ಸಮೀಪದ ತಮಿಳುನಾಡಿನ ಆಸನೂರು ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಾಗ ಆನೆಗಳ ಓಡಾಟಗಳು ಸಾಮಾನ್ಯ. ಈ ಹೆದ್ದಾರಿ ಮೂಲಕ ತರಕಾರಿ ಹಾಗೂ ಕಬ್ಬು ತುಂಬಿದ ಲಾರಿಗಳ ಸಂಚಾರ ಹೆಚ್ಚಾಗಿದ್ದು, ಆನೆಗಳು ಆಹಾರಕ್ಕಾಗಿ ಸರಕು ತುಂಬಿದ ಲಾರಿಗಳ ಮೇಲೆ ದಾಳಿ ಮಾಡುತ್ತಲೇ ಇರುತ್ತವೆ.
ಇನ್ನು ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ಕಂಡಿದೆ. ಕಾರಿನಲ್ಲಿ ಕುಳಿತಿದ್ದ ಯುವಕನೊಬ್ಬ ಆನೆಯನ್ನು ನೋಡಿದ್ದಾನೆ. ಬಳಿಕ ಕಾರಿನಿಂದ ಇಳಿದು ಆನೆ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳವ ದುಸ್ಸಾಹಕ್ಕೆ ಮುಂದಾಗಿದ್ದಾನೆ. ಆಗ ಆನೆ ಯುವಕನನ್ನು ಬೆನ್ನಟ್ಟಲು ಮುಂದಾಗಿದೆ. ಆನೆಯನ್ನು ಕಂಡ ಯುವಕ ಕಾರಿನಲ್ಲಿ ಕುಳಿತುಕೊಂಡು ಪ್ರಯಾಣ ಬೆಳಸಿದ್ದಾನೆ. ಇಲ್ಲವಾದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು.
ಇನ್ನು ಈ ಘಟನೆಯ ದೃಶ್ಯದ ವಿಡಿಯೋಗಳು ಕಾರಿನಲ್ಲಿ ಕುಳಿತ ಇನ್ನೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಆನೆ ಓಡಾಟದಿಂದ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಅರಣ್ಯ ಇಲಾಖೆ ಇನ್ನಾದರೂ ಯುವಕರ ಪುಂಡಾಟದ ವಿರುದ್ಧ ಕ್ರಮ ಕೈಗೊಂಡು, ಹೆದ್ದಾರಿಯಲ್ಲಿ ಆನೆ ಓಡಾಟಕ್ಕೆ ಕಡಿವಾಣ ಹಾಕಬೇಕಿದೆ.
ಓದಿ:ಚಾಮರಾಜನಗರ ಗಡಿಯಲ್ಲಿ ಮರಿ ಆನೆ ಅಟ್ಯಾಕ್...ಸವಾರ ಜಸ್ಟ್ ಮಿಸ್, ಬೈಕ್ ಪೀಸ್-ಪೀಸ್