ಕುದುರೆಮುಖದಿಂದ ಕಳಸಾ ಕಡೆಗೆ..: ನದಿ ದಾಟಿ ಕಾಡಾನೆಗಳ ಸವಾರಿ, ರೈತರಿಗೆ ತಲೆನೋವು - wild elephants crossing the river
ಚಿಕ್ಕಮಗಳೂರು: ಜಿಲ್ಲೆಯ ಕಳಸಾ ತಾಲೂಕಿನಾದ್ಯಂತ ಸಂಚರಿಸುತ್ತಿರುವ ಎರಡು ಗಂಡಾನೆಗಳು ಜನರಿಗೆ ತಲೆನೋವು ತಂದಿಟ್ಟಿವೆ. ಕಳಕೋಡು, ಎಸ್.ಕೆ ಮೇಗಲ್, ಅಬ್ಬಗುಡಿ ಸುತ್ತಮುತ್ತ ಇವು ಸಂಚರಿಸುತ್ತಿವೆ. ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳನ್ನು ಜನರು ಬೊಬ್ಬೆ ಹೊಡೆದು ಓಡಿಸುತ್ತಿದ್ದಾರೆ. ಪ್ರತಿನಿತ್ಯ ಕುದುರೆಮುಖದಿಂದ ಕಳಸಾಕ್ಕೆ ಸವಾರಿ ಮಾಡುತ್ತಿದ್ದು ನದಿಗಳನ್ನು ದಾಟಿ ಮುಂದಡಿ ಇಡುತ್ತಿವೆ. ರೈತರ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ಕಳಸಾದಲ್ಲಿ ಕಾಡಾನೆಗಳು ನದಿ ದಾಟುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
Last Updated : Feb 3, 2023, 8:29 PM IST