ಧಾರಾಕಾರ ಮಳೆಯಲ್ಲಿ MotoGP ರೈಡರ್ಸ್ ಜೊತೆ ಬೈಕ್ ಓಡಿಸಿದ ಸಚಿವ ಅನುರಾಗ್ ಠಾಕೂರ್- ವಿಡಿಯೋ
ನವದೆಹಲಿ :ಸೆಪ್ಟೆಂಬರ್ 22ರಿಂದ 24 ರವರೆಗೆ ಉತ್ತರ ಪ್ರದೇಶದ ಗೌತಮಬುದ್ಧ ನಗರದ ಬುದ್ಧ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಮೋಟೋ ಜಿಪಿ ರೇಸಿಂಗ್ ಈವೆಂಟ್‌ಗೂ ಮುನ್ನ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಶನಿವಾರ ಮೋಟೋಜಿಪಿ ರೈಡರ್‌ಗಳೊಂದಿಗೆ ಬೈಕ್ ಓಡಿಸಿ ಗಮನ ಸೆಳೆದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಭಾರತದಲ್ಲಿ ಮೊದಲ ಬಾರಿಗೆ ಮೋಟೋ ಜಿಪಿ ರೇಸಿಂಗ್ ಕಾರ್ಯಕ್ರಮ ಗೌತಮಬುದ್ಧ ನಗರದಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತೀಯರು ಈ ರೇಸ್‌ನಲ್ಲಿ ಭಾಗವಹಿಸುವರು. ಹೀಗಾಗಿ, ರೇಸಿಂಗ್ ಬೈಕ್‌ಗಳಿಗೆ ಉತ್ತೇಜನ ದೊರೆಯಲಿದೆ. ಆಟೋಮೊಬೈಲ್ ಉದ್ಯಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಆರಂಭವಷ್ಟೇ. ಈ ರೇಸಿಂಗ್‌ನಲ್ಲಿ ಭಾರತ ಹೊಸ ದಾಖಲೆ ಸಾಧಿಸಲಿದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ" ಎಂದು ಹೇಳಿದರು.
ಇದಕ್ಕೂ ಮುನ್ನ 'MotoGP ಇಂಡಿಯಾ 2023' ರ ಮೊದಲ ರೇಸ್‌ನ ಮೊದಲ ಟಿಕೆಟ್ ಅನಾವರಣಗೊಳಿಸಿ ಮಾತನಾಡಿದ್ದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "MotoGP ವಿಶ್ವದ ಅತಿ ದೊಡ್ಡ, ವೇಗದ ಮತ್ತು ಹಳೆಯ ಬೈಕ್ ರೇಸಿಂಗ್ ಸ್ಪರ್ಧೆಯಾಗಿದೆ. ಭಾರತವು ಮೊದಲ ಬಾರಿಗೆ ಈ ಕಾರ್ಯಕ್ರಮ ಆಯೋಜಿಸುತ್ತಿರುವುದು ಹೆಮ್ಮೆ ಮತ್ತು ಸಂತೋಷದ ವಿಷಯ. ಈ ರೇಸಿಂಗ್ ಸ್ಪರ್ಧೆಯ ಯಶಸ್ವಿ ನಿರ್ವಹಣೆಯು ಜಾಗತಿಕ ಮಟ್ಟದಲ್ಲಿ 'ಬ್ರಾಂಡ್ ಉತ್ತರ ಪ್ರದೇಶ'ವನ್ನು ದೃಢವಾಗಿ ಬಲಪಡಿಸುತ್ತದೆ" ಎಂದಿದ್ದರು.
ಇದನ್ನೂ ಓದಿ :Viral Video : ಅರೆಬೆತ್ತಲೆಯಾಗಿ ಬೈಕ್ನಲ್ಲಿ ತೆರಳುತ್ತಾ ಮಳೆಯಲ್ಲಿ ಸ್ನಾನ ಮಾಡಿದ ಯುವಕರು