VIDEO: ಸೋಶಿಯಲ್ ಮೀಡಿಯಾ ಹುಚ್ಚು, ದ್ವಿಚಕ್ರ ವಾಹನ ಕದ್ದು ಸ್ಟಂಟ್ ಮಾಡುತ್ತಿದ್ದ ಯುವಕರ ಬಂಧನ - ವ್ಹೀಲಿಂಗ್
ಬೆಂಗಳೂರು: ಕೇವಲ ಲೈಕ್ಸ್, ಕಾಮೆಂಟ್ಸ್ ಹುಚ್ಚಿಗೆ ದ್ವಿಚಕ್ರ ವಾಹನಗಳನ್ನ ಕದ್ದು ಅದರಲ್ಲಿ ವ್ಹೀಲಿಂಗ್, ಅಪಾಯಕಾರಿ ರೇಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಿತಿಕ್ (19) ಹಾಗೂ ಪವನ್ (19) ಬಂಧಿತ ಅರೋಪಿಗಳು.
ರಸ್ತೆ ಬದಿಯಲ್ಲಿ ನಿಲ್ಲಿಸಿರುತ್ತಿದ್ದ ಯಮಹಾ ಆರ್ಎಕ್ಸ್ ಸೇರಿದಂತೆ ವಿವಿಧ ದ್ವಿಚಕ್ರ ವಾಹನಗಳನ್ನ ಗುರುತಿಸಿಕೊಳ್ಳುತ್ತಿದ್ದ ಆರೋಪಿಗಳು, ಅವುಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ನಂತರ ಆ ದ್ವಿಚಕ್ರ ವಾಹನಗಳ ನಂಬರ್ ಪ್ಲೇಟ್ ತೆಗೆದುಹಾಕಿ ರಸ್ತೆಯಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡಿ ಅದರ ವಿಡಿಯೋಗಳನ್ನ ಇನ್ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಿಬ್ಬರನ್ನೂ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇವರ ವ್ಹೀಲಿಂಗ್ ವಿಡಿಯೋಗಳು ಕೂಡ ಲಭ್ಯವಾಗಿದ್ದು, ಹೆದ್ದಾರಿಯ ಮೇಲೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಮನ ಬಂದಂತೆ ವಾಹನ ಚಲಾಯಿಸಿರುವುದು, ಮತ್ತೊಬ್ಬ ವ್ಯಕ್ತಿ ಇದನ್ನೂ ಮೊಬೈಲ್ ಪೋನ್ನಲ್ಲಿ ಚಿತ್ರೀಕರಿಸುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ:ವ್ಹೀಲಿಂಗ್ ವೇಳೆ ಮತ್ತೊಂದು ಬೈಕ್ಗೆ ಡಿಕ್ಕಿ.. ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ- Video Viral