ಗನ್ ತೋರಿಸಿ ಮಹಿಳೆಯ ಸರಗಳ್ಳತನ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ - ಸರ ದೋಚುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗನ್ ತೋರಿಸಿ ಮಹಿಳೆಯೊಬ್ಬರ ಸರಗಳ್ಳತನ ಮಾಡಿದ್ದಾರೆ. ಸರ ದೋಚುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ರೋಹಿಣಿ ಪ್ರದೇಶದಲ್ಲಿ ಏಪ್ರಿಲ್ 13ರಂದು ಈ ಘಟನೆ ನಡೆದಿದೆ. ರಾತ್ರಿ 8.45ರ ಸುಮಾರಿಗೆ ಅಂಗಡಿಯೊಂದರ ಮುಂದೆ ಬೈಕ್ನಲ್ಲಿ ಇಬ್ಬರು ದುಷ್ಕರ್ಮಿಗಳು ಬಂದು ನಿಂತಿರುತ್ತಾರೆ. ಇದೇ ವೇಳೆ ಮಹಿಳೆಯೊಬ್ಬರು ಮೊಬೈಲ್ನಲ್ಲಿ ಮಾತನಾಡುತ್ತಾ ಅಂಗಡಿಯೊಳಗೆ ಬರುತ್ತಿರುತ್ತಾರೆ. ಅಂಗಡಿಗೆ ಪ್ರವೇಶಿಸುವ ಮುನ್ನವೇ ಬೈಕ್ನಲ್ಲಿದ್ದ ಓರ್ವ ಖದೀಮ ಮಹಿಳೆಯ ಕುತ್ತಿಗೆಯಲ್ಲಿದ್ದ ಸರಕ್ಕೆ ಕೈ ಹಾಕುತ್ತಾನೆ.
ಆಗ ತಕ್ಷಣವೇ ಎಚ್ಚೆತ್ತ ಮಹಿಳೆ ಚೀರಿ ಪ್ರತಿರೋಧವನ್ನು ತೋರಲು ಪ್ರಯತ್ನಿಸುತ್ತಾಳೆ. ಜೊತೆಗೆ ಅಂಗಡಿಯಲ್ಲಿದ್ದ ಯುವಕನೊಬ್ಬ ಮಹಿಳೆಯ ನೆರವಿಗೆ ಧಾವಿಸಲು ಮುಂದಾಗುತ್ತಾನೆ. ಆದರೆ, ಆ ದುಷ್ಕರ್ಮಿ ಗನ್ ತೋರಿಸಿ ಸರ ದೋಚಿ ಬೈಕ್ ಮೇಲೆ ಪರಾರಿಯಾಗುತ್ತಾನೆ. ಈ ಎಲ್ಲ ದೃಶ್ಯಗಳು ಅಂಗಡಿಯಲ್ಲಿ ಅವಳಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ತಿಹಾರ್ ಜೈಲಿನಲ್ಲಿ ಗ್ಯಾಂಗ್ ವಾರ್: ಕುಖ್ಯಾತ ದರೋಡೆಕೋರ ಪ್ರಿನ್ಸ್ ತೆವಾಟಿಯಾ ಹತ್ಯೆ