ಕರ್ನಾಟಕ

karnataka

ಸ್ವಾವಲಂಬನೆ ಜೀವನ ಸಾಗಿಸುವ ಮಂಗಳಮುಖಿ

By

Published : Jul 15, 2023, 6:38 PM IST

ETV Bharat / videos

ಭಿಕ್ಷಾಟನೆ ಬಿಟ್ಟು ರಸ್ತೆ ಬದಿ ತರಕಾರಿ ಮಾರಿ ಸ್ವಾವಲಂಬನೆ ಜೀವನ ಸಾಗಿಸುತ್ತಿರುವ ಮಂಗಳಮುಖಿ

ಬಾಗಲಕೋಟೆ:ಮಂಗಳಮುಖಿಯರು ಅಂದರೆ ಸಾಮಾನ್ಯವಾಗಿ ಎಲ್ಲರೂ ಮೂಗು ಮುರಿಯುತ್ತಾರೆ. ಆದರೆ, ಇಲ್ಲೊಬ್ಬ ಮಂಗಳಮುಖಿ ಭಿಕ್ಷಾಟನೆ ಬಿಟ್ಟು ತರಕಾರಿ ವ್ಯಾಪಾರ ಮಾಡುವ ಮೂಲಕ ಸ್ವಾವಲಂಬನೆ ಜೀವನ ಸಾಗಿಸುವ ಮೂಲಕ ಗಮನ ಸೆಳೆಯುತ್ತಿದ್ದು, ಇತರ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ. 

ಹೀಗೆ ತರಕಾರಿ ಅಂಗಡಿ ಇಟ್ಟು ವ್ಯಾಪಾರ ಮಾಡುತ್ತಿರುವ ಇವರ ಹೆಸರು ಸನಮ್ ಹಾಜಿ ಅಂತ. ಮೂಲತಃ ಬಾಗಲಕೋಟೆ ನಿವಾಸಿಯಾಗಿರುವ ಇವರು, ಜೀನನೋಪಾಯಕ್ಕಾಗಿ ತಮ್ಮದೇಯಾದ ತರಕಾರಿ ಅಂಗಡಿಯೊಂದನ್ನು ಇಟ್ಟುಕೊಂಡು ತಮ್ಮ ಇಡೀ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಸನಮ್ ಆರಂಂಭದಲ್ಲಿ ಹೆಣ್ಣಿನ ಹಾವ - ಭಾವ ಮಾಡುತ್ತಿದ್ದರಿಂದ ಮನೆಯವರರಿಂದಲೂ ತಿರಸ್ಕೃತಗೊಂಡು ಊರು ಬಿಟ್ಟಿದ್ದರು. ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಊರಿಗೆ ಸನಮ್, ಇಲ್ಲಿಯೇ ತರಕಾರಿ ಅಂಗಡಿ ಇಟ್ಟುಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.

ಸನಮ್ ಹಾಜಿಗೆ ಸದ್ಯ 21 ವರ್ಷ. ಇವರು 12ನೇ ವಯಸ್ಸಿನಲ್ಲೇ ಮನೆ ಬಿಟ್ಟು ಬೆಂಗಳೂರು ಸೇರಿದ್ದರು. ಅಲ್ಲಿಂದ ಬಂದ ಬಳಿಕ ಸಲೀಮ್ ಅಂತ ಇದ್ದ ತಮ್ಮ ಹೆಸರನ್ನು ಸನಮ್ ಅಂತ ಬದಲಾಯಿಸಿಕೊಂಡರು. ಮನೆಯವರ ನಿಂದನೆ, ಸಂಬಂಧಿಕರಿಂದ ಅವಮಾನ ತಾಳಲಾರದೇ ಬೆಂಗಳೂರು ನಂತರ ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಭಿಕ್ಷಾಟಣೆ ಯಂತಹ ಕೆಲಸಗಳಲ್ಲಿ ತೊಡಗಿದ್ದರು. ಬಳಿಕ 8 ತಿಂಗಳಿಂದೀಚೆಗೆ ಬಾಗಲಕೋಟೆಯಲ್ಲಿ ವಾಸವಾಗಿರುವ ಸನಮ್, ಮಿಲನ ಸಂಸ್ಥೆಯಿಂದ ಸಾಲ ಸೌಲಭ್ಯ ಪಡೆದು ತರಕಾರಿ ಅಂಗಡಿ ನಡೆಸುತ್ತಿದ್ದಾರೆ. 

ಮೊದ ಮೊದಲು ಮನೆಯವರಿಂದ ನಿಂದನೆಗೆ ಒಳಗಾಗುತ್ತಿದ್ದ ಸನಮ್,​ ಈಗ ಅವರೇ ಕುಟುಂಬಕ್ಕೆ ಆಸರೆಯಾಗಿದ್ದಾರೆ. ತಂದೆ-ತಾಯಿ ಕಳೆದುಕೊಂಡ ಸನಮ್​, ಸದ್ಯ ಅಜ್ಜಿ ಜೊತೆಗೆ ಜೀವನ ನಡೆಸಿದ್ದಾರೆ. ಚಿಕ್ಕಮ್ಮ ಜೊತೆಗೆ ತರಕಾರಿ ಅಂಗಡಿ ನಡೆಸುತ್ತಿದ್ದು ಇಡೀ ಕುಟುಂಬಕ್ಕೆ ಆಧಾರವಾಗಿದ್ದಾರೆ.

ಇದನ್ನೂ ಓದಿ:Bengaluru crime: ಮನೆಯಲ್ಲಿ ಗಂಡು, ರಸ್ತೆಯಲ್ಲಿ ಹೆಣ್ಣು.. ಐಷಾರಾಮಿ ಜೀವನಕ್ಕಾಗಿ ವೇಷ ಧರಿಸಿದ್ದ ಆರೋಪಿ ಅಂದರ್​

ABOUT THE AUTHOR

...view details