ಕರ್ನಾಟಕ

karnataka

ಕಮರಿಗೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ: ಸ್ಥಳದಲ್ಲೇ 9 ಸಾವು, 22 ಜನಕ್ಕೆ ಗಂಭೀರ ಗಾಯ

ETV Bharat / videos

ಕಮರಿಗೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ: ಸ್ಥಳದಲ್ಲೇ 9 ಸಾವು, 22 ಜನಕ್ಕೆ ಗಂಭೀರ ಗಾಯ - ETV Bharath Kannada news

By

Published : May 29, 2023, 10:32 PM IST

ಜುಂಜುನು(ರಾಜಸ್ಥಾನ): ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದ ವೇಳೆ ಟ್ರ್ಯಾಕ್ಟರ್ ಟ್ರಾಲಿ ಕಮರಿಗೆ ಬಿದ್ದು 9 ಜನ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಜುಂಜುನುವಿನ ಉದಯಪುರವತಿ ಪ್ರದೇಶದಲ್ಲಿ ನಡೆದಿದೆ. ಈ ದುರಂತದಲ್ಲಿ 22 ಮಂದಿ ಗಾಯಗೊಂಡಿದ್ದು, ಜಿಲ್ಲಾಧಿಕಾರಿ  ಸ್ಥಳಕ್ಕೆ ಧಾವಿಸಿ ಎಲ್ಲರನ್ನೂ ಉದಯಪುರವತಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆ ಸಂಜೆ 6 ಗಂಟೆ ಸುಮಾರಿಗೆ ನಡೆದಿದೆ. ಭಕ್ತರು ಮಾನಸ ಮಾತೆಯ ದರ್ಶನ ಪಡೆದು ಹಿಂತಿರುಗುತ್ತಿದ್ದರು. 22 ಜನ ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.  

ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಉದಯಪುರವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಖುಶಾಲ್ ಯಾದವ್ ಮತ್ತು ಎಸ್​ಪಿ ಮೃದುಲ್ ಕಚವಾ ಕೂಡ ಅಪಘಾತದ ವರದಿಯಾದ ತಕ್ಷಣ ಉದಯಪುರವತಿ ಆಸ್ಪತ್ರೆಗೆ ತೆರಳಿದ್ದಾರೆ. ಮಾನಸ ಮಾತಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ದುರ್ಗಾ ಮಾತೆಯ ವಿಶೇಷ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದ್ದು, ದೇಗುಲದಲ್ಲಿ ಸೋಮವಾರದ ಕಾರಣ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದಿದ್ದು ಇದಕ್ಕಾಗಿ ಭಕ್ತರು ತೆರಳಿದ್ದರು. ಪೂಜೆ ಮುಗಿಸಿ ಹಿಂದಿರುಗುವ ವೇಳೆ ದೇವಲಾಯದಿಂದ ಒಂದು ಕಿಮೀ ದೂರದಲ್ಲಿ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ:ಪ್ರವಾಸಕ್ಕೆ ತೆರಳಿದ್ದ ಮೂರು ಕುಟುಂಬಗಳ ಬದುಕಿನ ಪಯಣ ಅಂತ್ಯ: ಮೈಸೂರು ಭೀಕರ ಅಪಘಾತದ ಕೊನೆ ಕ್ಷಣದ ವಿಡಿಯೋ!

ABOUT THE AUTHOR

...view details