ಹಳ್ಳದಲ್ಲಿ ಸಿಲುಕಿಕೊಂಡ ಟ್ರ್ಯಾಕ್ಟರ್, ಕಾರ್ಮಿಕರು ಅಪಾಯದಿಂದ ಪಾರು - ಈಟಿವಿ ಭಾರತ ಕನ್ನಡ
ವಿಜಯಪುರ : ಇಂದು ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಮಳೆ ಲೆಕ್ಕಿಸದೇ ಹಳ್ಳ ದಾಟುವಾಗ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಸಿಲುಕಿಕೊಂಡಿರುವ ಘಟನೆ ನಿಡಗುಂದಿ ತಾಲೂಕಿನ ಮುತ್ತಗಿ ಹಳ್ಳದಲ್ಲಿ ನಡೆದಿದೆ. ಗೊಳಸಂಗಿಯಿಂದ ಮಸೂತಿಗೆ ಹೋಗುವ ರಸ್ತೆಯಲ್ಲಿನ ಹಳ್ಳ ಇದಾಗಿದ್ದು, ಮಹಾರಾಷ್ಟ್ರದ ಬೀಡ್ ಜಿಲ್ಲೆಯಿಂದ ಗೊಳಸಂಗಿಗೆ ಬಂದಿರುವ 24 ಕೂಲಿಕಾರ್ಮಿಕರು ನೀರಲ್ಲಿ ಸಿಲುಕಿದ್ದರು. ಹಳ್ಳದಲ್ಲಿನ ನೀರಿನ ರಭಸಕ್ಕೆ ಟ್ರ್ಯಾಕ್ಟರ್ ಅನ್ನು ಹೊರ ತೆಗೆಯಲು ಚಾಲಕ ಹರಸಾಹಸ ಪಟ್ಟಿದ್ದು, ಬಳಿಕ ಬೇರೊಂದು ಟ್ರ್ಯಾಕ್ಟರ್ ಸಹಾಯದಿಂದ ನೀರಲ್ಲಿ ಸಿಲುಕಿದ ಟ್ರ್ಯಾಕ್ಟರ್ ಸ್ಥಳೀಯರು ಹೊರ ತೆಗೆದಿದ್ದಾರೆ. ಕೂಲಿಕಾರ್ಮಿಕರೆಲ್ಲ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
Last Updated : Feb 3, 2023, 8:29 PM IST