ಕರ್ನಾಟಕ

karnataka

ಅಲಿಕಲ್ಲು ಮಳೆ

ETV Bharat / videos

ಬಿಸಿಲು ನಾಡು ರಾಯಚೂರಿನಲ್ಲಿ ಗುಡುಗು ಸಹಿತ ಅಲಿಕಲ್ಲು ಮಳೆ

By

Published : Mar 16, 2023, 11:09 PM IST

ರಾಯಚೂರು :ಬೇಸಿಗೆ ದಿನಗಳು ಶುರುವಾಗಿದ್ದು, ರಾಯಚೂರು ಜಿಲ್ಲೆಯ ನಿತ್ಯ ಜನ ಸುಡು ಬಿಸಿಲಿನ ತಾಪಮಾನ ಅನುಭವಿಸುತ್ತಿದ್ದಾರೆ. ಆದರೆ, ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಹಾಗೂ ವಂದಲಿ ಗ್ರಾಮದಲ್ಲಿ ಕೆಲ ಸಮಯ ಮಳೆ ಜೊತೆಗೆ ಅಲಿಕಲ್ಲು ಮಳೆಯಾಗಿದೆ. ಅಲ್ಪ ಕಾಲ ಅಲಿಕಲ್ಲು ಮಳೆ ಸುರಿದಿದ್ದು, ಬೇಸಿಗೆ ಆರಂಭದ ದಿನಗಳು ಆಗಿರುವುದರಿಂದ ನಿತ್ಯ ಬಿಸಿಲಿನ ಝಳ ಕಾಣುತ್ತಿತ್ತು. ಆದರೆ ರಾಜ್ಯದ ನಾನಾ ಕಡೆಗಳಲ್ಲಿ ಮಳೆಯಾಗಿರುವ ಪರಿಣಾಮ ಜಿಲ್ಲೆಯ ಬೆಳಗ್ಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಬಿರುಬಿಸಿಲಿನ ತಾಪ ಹೆಚ್ಚಾಗಿ ಬೇವರಿನಿಂದ ಜನರು ಬಸವಳಿಯುವಂತೆ ಆಗಿತ್ತು. 

ಆದರೆ, ಸಂಜೆಯ ವೇಳೆಯಲ್ಲಿ ವಂದಲಿ ಹಾಗೂ ಮದರಕಲ್ ಗ್ರಾಮದಲ್ಲಿ ಅಲಿಕಲ್ಲು ಮಳೆಯಾಗಿದ್ದು, ಇದರಿಂದ ಗ್ರಾಮದಲ್ಲಿ ಕೆಲವರು ಸಂತಸ ಪಟ್ಟರು. ಆದರೆ, ಗ್ರಾಮದಲ್ಲಿ ಸಜ್ಜೆ ಬೆಳೆಗಾರರಿಗರ ಆತಂಕವನ್ನು ಮೂಡಿಸಿದೆ. ಈಗಾಗಲೇ ಸಜ್ಜೆ ಫಸಲು ಬರುತ್ತಿದ್ದು, ಮಳೆಯಿಂದ ಬೆಳೆಗೆ ಸುಂಕ ತಗಲು ಭೀತಿ ರೈತರ ಬೆಳೆಗಳಿಗೆ ಎದುರಾಗಿದೆ. ಸದ್ಯ ಜಿಲ್ಲೆಯ ಮೋಡ‌ ಕವಿದ ವಾತಾವರಣ ನಿರ್ಮಾಣವಾಗಿದೆ. ಗುಡಗು ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿದ ಪರಿಣಾಮ ದೇವದುರ್ಗ ತಾಲೂಕಿನ ಅರಕೇರಾ ಗಲಗ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿರುವ ಘಟನೆ ನಡೆದಿದೆ. ಹನುಮಂತಪ್ಪ ಗೊಲ್ಲರ್ ಎಂಬುವವರ ಎತ್ತು ಬಲಿಯಾಗಿದೆ. 

ಇದನ್ನೂ ಓದಿ :ಬೆಂಗಳೂರಿಗೆ ಇಂದಿನಿಂದ 3 ದಿನ ಮಳೆ ಮುನ್ಸೂಚನೆ

ABOUT THE AUTHOR

...view details