74ನೇ ಗಣರಾಜ್ಯೋತ್ಸವ: ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪಥ ಸಂಚಲನ - ಗಣರಾಜ್ಯೋತ್ಸವ ಪಥ ಸಂಚಲನ
ಜಗದಲ್ಪುರ (ಛತ್ತೀಸ್ ಗಡ): ಇಲ್ಲಿನ ಬಸ್ತಾರ್‌ನಲ್ಲಿ ನಡೆದ 74ನೇ ಗಣರಾಜ್ಯೋತ್ಸವದಲ್ಲಿ ತೃತೀಯ ಲಿಂಗಿಗಳು ಭಾಗಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಇಲ್ಲಿನ ಲಾಲ್ಭಾಗ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ತೃತೀಯ ಲಿಂಗಿ ಭದ್ರತಾ ಸಿಬ್ಬಂದಿ ಭಾಗಹಿಸಿದರು. ಪಥಸಂಚಲನದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಗಳಿಂದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಗೌರವ ವಂದನೆ ಸ್ವೀಕರಿಸಿದರು. ಒಟ್ಟು ಆರು ತೃತೀಯ ಲಿಂಗಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.
ಮೊದಲ ಬಾರಿಗೆ ತೃತೀಯಲಿಂಗಿಗಳ ಪಥಸಂಚಲನ : ಬಸ್ತಾರ್‌ನಲ್ಲಿ ನಕ್ಸಲರ ವಿರುದ್ಧ ಹೋರಾಡಲು ಒಂದು ಪಡೆಯನ್ನು ಕಟ್ಟಲಾಗಿದೆ. ಈ ಪಡೆಯಲ್ಲಿ ಸ್ಥಳೀಯ ಯುವಕ ಮತ್ತು ಯುವತಿಯರನ್ನು ತರಬೇತಿ ನೀಡಿ ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲದೆ ತೃತೀಯ ಲಿಂಗಿಗಳನ್ನು ಈ ಪಡೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದನ್ನು ಬಸ್ತಾರ್ ಫೈಟರ್ಸ್ ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಸ್ತಾರ್ ಐಜಿ ಸುಂದರರಾಜ್ ಪಿ, ಈ ಬಾರಿಯ ಪಥಸಂಚಲನದಲ್ಲಿ ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳೂ ಭಾಗವಹಿಸಿರುವುದು ವಿಶೇಷ. ಈ ಮೂಲಕ ಬಸ್ತಾರ್ ಇತಿಹಾಸ ಸೃಷ್ಟಿಸಿದೆ. ಛತ್ತೀಸ್‌ಗಢದಲ್ಲಿ ಹಿಂದೆಂದೂ ಇದು ನಡೆದಿಲ್ಲ ಎಂದರು. ಪಥ ಸಂಚಲನದಲ್ಲಿ ತೃತೀಯಲಿಂಗಿಗಳು ಭಾಗವಹಿಸಿರುವುದು ಸಮಾಜಕ್ಕೆ ಸಮಾನತೆ ಸಂದೇಶ ಹೋಗುತ್ತದೆ. ಜೊತೆಗೆ ತೃತೀಯಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಹಕ್ಕು ಸಿಗುತ್ತದೆ. ಬಸ್ತಾರ್ ಪೊಲೀಸ್ ಅಧಿಕಾರಿಗಳು ತೆಗೆದುಕೊಂಡ ನಿರ್ಧಾರ ಅತ್ಯಂತ ಶ್ಲಾಘನೀಯ ಎಂದು ಹೇಳಿದರು.
ಇದನ್ನೂ ಓದಿ :ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ..