ಹಾಸನ: ತಪ್ಪಿದ ಚಾಲಕನ ನಿಯಂತ್ರಣ.. ಪಲ್ಟಿ ಹೊಡೆದ ಲಾರಿ
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾದ ಘಟನೆ ಹಾಸನದಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೊರಟಿದ್ದ ಲಾರಿ ಹಾಸನದ ಎನ್ಆರ್ ವೃತ್ತದ ಸಿಗ್ನಲ್ ನಿಂದ ಗಾಂಧಿ ಬಜಾರ್ ಕ್ರಾಸ್ನಲ್ಲಿ ಅತಿವೇಗದಲ್ಲಿ ಆಗಮಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಡಿವೈಡರ್ಗೆ ಹಾಕಿದ್ದ ಗ್ರಿಲ್ಸ್ ಸಂಪೂರ್ಣ ಮುರಿದು ಹೋಗಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನು, ಅಪಘಾತದ ದೃಶ್ಯ ಸ್ಥಳದಲ್ಲಿದ್ದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಲಾರಿ ಚಾಲಕನ ಮೇಲೆ ಹಾಸನ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated : Feb 3, 2023, 8:38 PM IST