ಕರ್ನಾಟಕ

karnataka

Team India arrives in Mumbai

ETV Bharat / videos

ಮುಂಬೈಗೆ ಬಂದಿಳಿದ ಅಜೇಯ ಭಾರತ; ಮುಂದಿನ ಟಾರ್ಗೆಟ್ ಲಂಕಾ, ವಾಂಖೆಡೆಯಲ್ಲಿ ಪಂದ್ಯ-ವಿಡಿಯೋ - ETV Bharath Karnataka

By ETV Bharat Karnataka Team

Published : Oct 30, 2023, 4:49 PM IST

ಮುಂಬೈ (ಮಹಾರಾಷ್ಟ್ರ): ಟೀಮ್​ ಇಂಡಿಯಾ ಕ್ರಿಕೆಟಿಗರು ಲಖನೌನಿಂದ ಇಂದು ಮುಂಬೈಗೆ ಬಂದು ತಲುಪಿದರು. ಮುಂಬೈ ವಿಮಾನ ನಿಲ್ದಾಣದಿಂದ ಆಟಗಾರರು ಬಸ್​ ಮುಖಾಂತರ ಹೊಟೇಲ್​ಗೆ ತೆರಳಿದರು. ಮಂಗಳವಾರದಿಂದ ನೆಟ್ ಅಭ್ಯಾಸ ಆರಂಭಿಸಲಿದ್ದಾರೆ. 

ವಿರಾಟ್​ ಕೊಹ್ಲಿ ಹೊರತುಪಡಿಸಿ ನಾಯಕ ರೋಹಿತ್​ ಶರ್ಮಾ, ಶುಭ್‌ಮನ್​ ಗಿಲ್​, ಇಶಾನ್​ ಕಿಶನ್​ ಅವರೊಂದಿಗೆ ತಂಡದ ಎಲ್ಲಾ ಸದಸ್ಯರು ಇದ್ದರು. ನವೆಂಬರ್​ 2ರಂದು ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ತನ್ನ 7ನೇ ಪಂದ್ಯ ಆಡಲಿದೆ. 

ಬಾಂಗ್ಲಾದೇಶದ ವಿರುದ್ಧ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಲಂಕಾ ವಿರುದ್ಧ ಮೈದಾನಕ್ಕಿಳಿಯುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಬಿಸಿಸಿಐ, ಹಾರ್ದಿಕ್​ ಅವರ ಆರೋಗ್ಯದ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.  

ಭಾನುವಾರ ಲಖನೌನಲ್ಲಿ ಆಂಗ್ಲರ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ 100 ರನ್‌ಗಳ ಜಯ ದಾಖಲಿಸಿತು. ಸತತ 6 ಪಂದ್ಯಗಳನ್ನು ಗೆದ್ದಿರುವ ತಂಡ 12 ಅಂಕಗಳಿಂದ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇದರಿಂದ ಸೆಮಿಫೈನಲ್​ ಪ್ರವೇಶ ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. 

ಟೀಮ್​​ ಇಂಡಿಯಾಕ್ಕೆ ಒಂಬತ್ತರಲ್ಲಿ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ನವೆಂಬರ್​ 2ಕ್ಕೆ ಸಿಂಹಳೀಯರ ವಿರುದ್ಧ ಆಡಿದರೆ, ನ.5ಕ್ಕೆ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ. 12ಕ್ಕೆ ನೆದರ್ಲೆಂಡ್ಸ್‌ ವಿರುದ್ಧ ಭಾರತ ತನ್ನ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಆಡಲಿದೆ.  

ಇದನ್ನೂ ಓದಿ:ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ 40 ವಿಕೆಟ್ ಸಾಧನೆ​​​: ಅಲನ್ ಡೊನಾಲ್ಡ್‌ ದಾಖಲೆ ಮುರಿದ ಮೊಹಮ್ಮದ್ ಶಮಿ

ABOUT THE AUTHOR

...view details