24 ಸಾವಿರ ವಿದ್ಯಾರ್ಥಿಗಳಿಂದ 15 ಕಿ.ಮೀ ಉದ್ದದ ಮಾನವ ಸರಪಳಿ! ಯಾಕೆ ಗೊತ್ತೇ? - ಮಾನವ ಸರಪಳಿ
Published : Dec 15, 2023, 4:18 PM IST
ಸೂರತ್(ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ದೇಶವ್ಯಾಪಿ ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸೂರತ್ನಲ್ಲಿ ಇಂದು ವಿದ್ಯಾರ್ಥಿಗಳು ವಿನೂತನ ಪ್ರಯತ್ನ ಮಾಡಿದರು. ಹಲವಾರು ಶಾಲಾ, ಕಾಲೇಜುಗಳ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದರಲ್ಲದೇ, ಸ್ವಚ್ಛತಾ ಪ್ರತಿಜ್ಞೆ ಸ್ವೀಕರಿಸಿದರು.
ಡಿಸೆಂಬರ್ 17ರಂದು ಮೋದಿ ಸೂರತ್ ನಗರಕ್ಕೆ ಭೇಟಿ ನೀಡುವರು. ಇಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತಿದೊಡ್ಡ ಡೈಮಂಡ್ ಬರ್ಸಾ ಕಚೇರಿ ಉದ್ಘಾಟನೆ, ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಯ ಕಾಮಗಾರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರಧಾನಿ ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸ್ವಚ್ಛತಾ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸೂರತ್ ನಗರ ಪಾಲಿಕೆ ಮಾನವ ಸರಪಳಿ ರಚಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ನಗರದ 30 ಬ್ಲಾಕ್‌ಗಳ ಎಲ್ಲ ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಇಲ್ಲಿನ ಪೊಲೀಸ್ ಪರೇಡ್ ಮೈದಾನದಿಂದ ಗಡೋದರ ಜೋಗನಿ ಮಾತಾ ದೇವಸ್ಥಾನದವರೆಗೆ 15 ಕಿ.ಮೀ ರಸ್ತೆಯುದ್ದಕ್ಕೂ ಮಕ್ಕಳು ಸಾಲಾಗಿ ಕೈ ಕೈ ಹಿಡಿದುಕೊಂಡು ಮಾನವ ಸರಪಳಿ ನಿರ್ಮಿಸಿದರು. ಗೃಹ ಸಚಿವ ಹರ್ಷ ಸಾಂಘ್ವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸ್ವಿಗ್ಗಿ- 2023: ಈ ವರ್ಷವೂ ಬಿರಿಯಾನಿಯೇ ಟಾಪ್ ಟ್ರೆಂಡಿಂಗ್: ಕೇಕ್ ಕ್ಯಾಪಿಟಲ್ ಬೆಂಗಳೂರು!