ಕಣಿವೆ ನಾಡಿಗೆ ಹಿಮದ ಹೊದಿಕೆ: ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್- ವಿಡಿಯೋ
ಶ್ರೀನಗರ (ಜಮ್ಮುಮತ್ತು ಕಾಶ್ಮೀರ): ಕಾಶ್ಮೀರ ಕಣಿವೆಯಲ್ಲಿ ಇಂದು ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದು ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಚಂದರ್‌ಕೋಟ್ ಮತ್ತು ಬನಿಹಾಲ್ ನಡುವಿನ ಅನೇಕ ಸ್ಥಳಗಳಲ್ಲಿ ಕಲ್ಲು, ಮಣ್ಣಿನ ಕುಸಿತವಾಗುತ್ತಿದ್ದು ಸಂಚಾರಕ್ಕೆ ತಡೆಯೊಡ್ಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, "ಇಂದು ಸಂಜೆ ಮತ್ತು ಮಂಗಳವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಮಳೆ ಮತ್ತು ಭಾರಿ ಹಿಮಪಾತವಾಗಲಿದೆ. ಸೋಮವಾರ ಸಂಜೆಯಿಂದ ಹವಾಮಾನದಲ್ಲಿ ಸ್ವಲ್ಪ ಸುಧಾರಣೆ ಕಂಡುಬರಲಿದ್ದು, ಆದಾಗ್ಯೂ, ಕೆಲವು ಸ್ಥಳಗಳಲ್ಲಿ ಮಂಗಳವಾರ ಬೆಳಗಿನ ತನಕ ಮಳೆ/ಹಿಮ ದಾಖಲಾಗಬಹುದು" ಎಂದು ಮುನ್ಸೂಚನೆ ನೀಡಿದ್ದಾರೆ. ಎತ್ತರದ ಪ್ರದೇಶಗಳಲ್ಲಿ ಸಂಭವಿಸುತ್ತಿರುವ ಹಿಮಪಾತವು ಸಾರಿಗೆ ಮೇಲೆ ಭಾರಿ ಪರಿಣಾಮ ಬೀರಿದ್ದು, ರಾಷ್ಟ್ರೀಯ ಹೆದ್ದಾರಿ ಮುಚ್ಚಲಾಗಿದೆ.
ಇದನ್ನೂ ಓದಿ:ಎಲ್ಲೆಡೆ ಹಿಮದ ರಾಶಿ.. ಕಾಶ್ಮೀರ ರಸ್ತೆಯಲ್ಲಿ ಮಂಜುಗಡ್ಡೆ ತೆರವು ಕಾರ್ಯಾಚರಣೆ: ವಿಡಿಯೋ