ಕರ್ನಾಟಕ

karnataka

ಶೋಭರಾಜ್​ಗೆ ಶ್ರೀ ಸಿದ್ದಶ್ರೀ ಪ್ರಶಸ್ತಿ

ETV Bharat / videos

700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶೋಭರಾಜ್​ಗೆ ಶ್ರೀ ಸಿದ್ದಶ್ರೀ ಪ್ರಶಸ್ತಿ

By ETV Bharat Karnataka Team

Published : Jan 17, 2024, 3:09 PM IST

ಬಾಗಲಕೋಟೆ: ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಚಲನಚಿತ್ರೋತ್ಸವ ಹಾಗೂ ಶ್ರೀ ಸಿದ್ದಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಗದಗಿನ ಪಂಚಾಕ್ಷರಿ ಗವಾಯಿಗಳ ಮಠದ ಕಲ್ಲಯ್ಯಜ್ಜ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಮಯದಲ್ಲಿ ಸಿದ್ದನಕೊಳ್ಳದ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಕಲ್ಲಯ್ಯಜ್ಜನವರ ತುಲಾಭಾರ ನೆರವೇರಿಸಲಾಯಿತು. ಜೊತೆಗೆ, ಪ್ರತೀ ವರ್ಷ ಕೂಡಮಾಡುವ ಶ್ರೀ ಸಿದ್ದಶ್ರೀ ಪ್ರಶಸ್ತಿಯನ್ನು ಈ ಬಾರಿ ಚಲನಚಿತ್ರದಲ್ಲಿ ಖಳನಾಯಕನ ಪಾತ್ರ ನಿರ್ವಹಿಸುತ್ತಿರುವ ಶೋಭರಾಜ್​​ ಅವರಿಗೆ ನೀಡಲಾಯಿತು. ಪ್ರಶಸ್ತಿ ಫಲಕದ ಜೊತೆಗೆ 50 ಸಾವಿರ ನಗದು ಹಣವನ್ನು ಸ್ವಾಮೀಜಿ ಹಸ್ತಾಂತರಿಸಿದರು.

ಪ್ರಶಸ್ತಿ ಸ್ವೀಕರಿಸಿದ ಶೋಭರಾಜ್​​ ಮಾತನಾಡಿ, ಉತ್ತರ ಕರ್ನಾಟಕದ ಜನರು ಸಿನಿಮಾಗಳನ್ನು ವೀಕ್ಷಿಸಿದರೆ ಮಾತ್ರ ನಮ್ಮಂತಹ ಕಲಾವಿದರು ಬೆಳೆಯುತ್ತಾರೆ. ಸಿದ್ದನಕೊಳ್ಳ ಮಠಕ್ಕೆ ಆಗಮಿಸಿ, ಪ್ರಶಸ್ತಿ ಪಡೆದಿರುವುದರಿಂದ ಜೀವನ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿದೆ ಎಂದರು. ಇದೇ ಸಮಯದಲ್ಲಿ ಶಾಸಕರಾದ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಿದ್ದನಕೊಳ್ಳ ಮಠದಲ್ಲಿ ರಾಜಕೀಯ ನಡೆಯುವುದಿಲ್ಲ. ಪಕ್ಷಾತೀತವಾದ ಮಠ. ಕಲಾವಿದರನ್ನು ಬೆಳೆಸುವ ಇಂತಹ ಮಠಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ಉತ್ತರಕರ್ನಾಟಕದ ಜನರು ಸಿನಿಮಾ ನೋಡಿದರೆ ಮಾತ್ರ ಸಿನಿಮಾರಂಗ ಬೆಳೆಯುತ್ತದೆ ಎಂದರು. ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ, 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶೋಭರಾಜ್​ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡುವ ಶ್ರೀ ಸಿದ್ದಶ್ರೀ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು. ಮೂರು ದಿನಗಳ ಈ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದಿವೆ.  

ಇದನ್ನೂ ಓದಿ:ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದ ಯಶ್​ ತಂಡ

ABOUT THE AUTHOR

...view details