ರಸ್ತೆ ದಾಟುತ್ತಿದ್ದ ವೃದ್ಧೆ ಉಳಿಸಲು ಏಕಾಏಕಿ ಬ್ರೇಕ್: ಬೆಂಗಳೂರಲ್ಲಿ ಸರಣಿ ಅಪಘಾತ - ಹೆಬ್ಬಾಳ ಬಳಿ ಸರಣಿ ಅಪಘಾತ
ಬೆಂಗಳೂರು: ಹೆಬ್ಬಾಳದ ಬಳಿ ನಾಲ್ಕು ಕಾರು, ಒಂದು ಕ್ಯಾಂಟರ್ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಎರಡು ಕಾರುಗಳು ಜಖಂ ಆಗಿವೆ. ಸ್ಥಳಕ್ಕೆ ಹೆಬ್ಬಾಳ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಚಾಲಕರು ಅಪಾಯದಿಂದ ಪಾರಾಗಿದ್ದಾರೆ. ರಸ್ತೆ ದಾಟಲು ಯತ್ನಿಸಿದ್ದ ಓರ್ವ ವೃದ್ಧೆಯ ಜೀವ ಉಳಿಸಲು ಮೊದಲ ಕಾರು ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಸರಣಿ ಅಪಘಾತವಾಗಿದೆ ಎಂದು ತಿಳಿದುಬಂದಿದೆ.
Last Updated : Feb 3, 2023, 8:25 PM IST