ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಲಾರ್ ಚಿತ್ರ ತಂಡ ಭೇಟಿ - ವಿಡಿಯೋ
Published : Jan 12, 2024, 10:49 PM IST
ಮಂಗಳೂರು (ದಕ್ಷಿಣ ಕನ್ನಡ) :ಸಲಾರ್ ಸಿನಿಮಾ ತಂಡ ಇಂದು ಮಂಗಳೂರಿನ ಹೊರವಲಯದಲ್ಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿತು. ನಟ ಪ್ರಭಾಸ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ‘ಸಲಾರ್’ ಯಶಸ್ಸಿನ ಬೆನ್ನಲ್ಲೇ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇವರೊಂದಿಗೆ ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಂಗದೂರು ಅವರು ಕಾಣಿಸಿಕೊಂಡಿದ್ದಾರೆ.
ತೆಲುಗು, ಕನ್ನಡ, ತಮಿಳು, ಮಾಲಯಳಂ ಮತ್ತು ಹಿಂದಿ ಭಾಷೆಯಲ್ಲಿ ಸಲಾರ್ ಸಿನಿಮಾ 2023 ಡಿಸೆಂಬರ್ 22ರಂದು ಬಿಡುಗಡೆ ಆಗಿತ್ತು. ಮುಖ್ಯ ಭೂಮಿಕೆಯಲ್ಲಿ ಪ್ರಭಾಸ್, ಶ್ರುತಿ ಹಾಸನ್ ಮತ್ತು ಮಾಲಯಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಪ್ರಭಾಸ್‌ಗೆ ‘ಸಲಾರ್’ ಚಿತ್ರದ ಮೂಲಕ ಮತ್ತೆ ಯಶಸ್ಸು ಸಿಕ್ಕಿದೆ. ಇದೇ ಸಂಭ್ರಮಲ್ಲಿ ಚಿತ್ರ ತಂಡ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದೆ. ಈಗಾಗಲೇ ಸಲಾರ್ ಹಾಡುಗಳು ಸಿನಿ ಪ್ರಿಯರ ಮನ ಗೆದ್ದಿದೆ. ಅಲ್ಲದೆ, ಕೋಟಿ ಕೋಟಿ ಕಲೆಕ್ಷನ್ ಕೂಡ ಮಾಡುತ್ತಿದೆ.
ಇದನ್ನೂ ಓದಿ : ನಟ ನಿಶ್ ತೇಜಶ್ವರ್ಗೆ 'ಆರಾಮ್ ಅರವಿಂದ ಸ್ವಾಮಿ' ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್