ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬದ ವಿಶೇಷ ಆಚರಣೆ ಹೀಗಿತ್ತು! - ಸಾಂಗ್ಲಿಯಲ್ಲಿ ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ ಆಚರಣೆ
ಸಾಂಗ್ಲಿ (ಮಹಾರಾಷ್ಟ್ರ): ಕ್ರಿಕೆಟ್ನ ದಂತಕಥೆ ಹಾಗೂ ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡೂಲ್ಕರ್ ಇಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ದಿನದಂದು ಅವರ ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಪ್ರಿಯರು ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಿರಾಳ ತಾಲೂಕಿನ ಔಂಧಿಯ ಗ್ರಾಮದಲ್ಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ರ ಹುಟ್ಟುಹಬ್ಬವನ್ನು ವಿಭಿನ್ನ ಮತ್ತು ವಿಶೇಷವಾಗಿ ಆಚರಿಸಿದ್ದಾರೆ. ಗ್ರಾಮದ ಪ್ರತಿಯೊಂದು ಮನೆಗೆಳ ಮುಂದೆ 'ತೆಂಡ್ಲ್ಯಾ' ಚಿತ್ರತಂಡ ಬ್ಯಾಟ್ ಸೇರಿದಂತೆ ಸಚಿನ್ ಅವರ ಚಿತ್ರವನ್ನು ಬಿಡಿಸಿ ರಂಗೋಲಿ ಹಾಕಿದ್ದಾರೆ.
ಇನ್ನು ಸಾಂಗ್ಲಿಯ ವಾಳ್ವಾದ ಸಚಿನ್ ಜಾಧವ್ ಅವರು ಸಚಿನ್ ತೆಂಡೂಲ್ಕರ್ರ ಕುರಿತಾದ 'ತೆಂಡ್ಲ್ಯಾ' ಎಂಬ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರ ಮೇ 5 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರವು ಈಗಾಗಲೇ ಐದು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಗೆದ್ದಿದೆ. ಚಿತ್ರ ಬಿಡುಗಡೆಗೂ ಮುನ್ನ ಸಚಿನ್ ಹುಟ್ಟುಹಬ್ಬವನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ.
ಗ್ರಾಮದಲ್ಲಿ ಸಚಿನ್ರ ಬೃಹತ್ ಗಾತ್ರದ ಕಟೌಟ್ ಹಾಕಲಾಗಿದೆ. ಆಚರಣೆಯಲ್ಲಿ ಖ್ಯಾತ ಕ್ರಿಕೆಟ್ ನಿರೂಪಕ ಮತ್ತು ಸಚಿನ್ ತೆಂಡೂಲ್ಕರ್ ಅವರ ಅಭಿಮಾನಿ ಸುನಂದನ್ ಲೆಲೆ ಭಾಗಿಯಾಗಿದ್ದರು. ಅಲ್ಲದೇಸಚಿನ್ ಅವರ ಜನ್ಮದಿನವನ್ನು "ವಿಶ್ವ ಕ್ರಿಕೆಟ್" ಎಂದು ಆಚರಿಸಲು ಹೇಳಿದರು.
ಇದನ್ನೂ ಓದಿ:ಜೀವನದ 'ಹಾಫ್ ಸೆಂಚುರಿ' ಸಂಭ್ರಮದಲ್ಲಿ 'ಕ್ರಿಕೆಟ್ ದೇವರು': ಸಚಿನ್ ಸಾಧನೆಗೆ ಸರಿಸಾಟಿ ಯಾರು?