ಉದ್ಯಮಿ ಮಿಸ್ತ್ರಿ ಕಾರು ಅಪಘಾತಕ್ಕೂ ಕೆಲ ನಿಮಿಷಗಳ ಹಿಂದಿನ ಸಿಸಿಟಿವಿ ವಿಡಿಯೋ - Etv bharat Kannada
ಮುಂಬೈ: ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವನ್ನಪ್ಪಿದ್ದಾರೆ. ಈ ಅಪಘಾತ ನಡೆಯುವ ಕೆಲವು ನಿಮಿಷಗಳ ಹಿಂದಿನ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. 54 ವರ್ಷದ ಮಿಸ್ತ್ರಿ ಅವರ ಮರ್ಸಿಡಿಸ್ ಜಿಎಲ್‌ಸಿ 220 ಕಾರು ಮಹಾರಾಷ್ಟ್ರದ ಪಾಲ್ಘರ್ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಅಪಘಾತದಲ್ಲಿ ಮಿಸ್ತ್ರಿ ಮತ್ತು ಅವರ ಸ್ನೇಹಿತ ಜಹಾಂಗೀರ್ ಪಾಂಡೋಲೆ (49) ಸಾವನ್ನಪ್ಪಿದ್ದು, ಕಾರು ಚಲಾಯಿಸುತ್ತಿದ್ದ ವೈದ್ಯೆ ಅನಹಿತಾ ಪಾಂಡೋಲೆ ಮತ್ತು ಅವರ ಪತಿ ಡೇರಿಯಸ್ ಪಾಂಡೋಲೆ ಗಂಭೀರವಾಗಿ ಗಾಯಗೊಂಡಿದ್ದರು. ಈ ಸಿಸಿಟಿವಿ ದೃಶ್ಯಾವಳಿಯು ಪಾಲ್ಘರ್ನ ಡಾಪ್ಚೆರಿಯ ಚೆಕ್ಪೋಸ್ಟ್ನದ್ದು ಎಂದು ತಿಳಿದುಬಂದಿದೆ.
Last Updated : Feb 3, 2023, 8:27 PM IST