ಕರ್ನಾಟಕ

karnataka

ಅಂತಾರಾಷ್ಟ್ರೀಯ ದೇವಾಲಯಗಳ ಸಮಾವೇಶ, ಎಕ್ಸ್‌ಪೋ ಉದ್ಘಾಟಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ETV Bharat / videos

ಅಂತಾರಾಷ್ಟ್ರೀಯ ದೇವಾಲಯಗಳ ಸಮಾವೇಶ, ಎಕ್ಸ್‌ಪೋ ಉದ್ಘಾಟಿಸಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

By

Published : Jul 22, 2023, 6:13 PM IST

ವಾರಾಣಸಿ (ಉತ್ತರ ಪ್ರದೇಶ):ವಾರಾಣಸಿಯಲ್ಲಿ ಮೂರು ದಿನಗಳ ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ದೇವಾಲಯಗಳ ಸಮಾವೇಶ ಮತ್ತು ಎಕ್ಸ್‌ಪೋಗೆ (ಐಟಿಸಿಎಕ್ಸ್) ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಉದ್ಘಾಟಿಸಿದರು. ದೇವಾಲಯದ ನಿರ್ವಹಣೆಯ ಸಮಸ್ಯೆಗಳನ್ನು ಚರ್ಚಿಸುವುದರ ಹೊರತಾಗಿ ದೇವಾಲಯಗಳ ಜಂಟಿ ವೇದಿಕೆಯನ್ನು ರಚಿಸುವ ಸಾಧ್ಯತೆಯನ್ನು ಸಮಾವೇಶವು ಅನ್ವೇಷಿಸುತ್ತದೆ. ಹಿಂದೂ, ಬೌದ್ಧ, ಜೈನ ದೇವಾಲಯಗಳು ಮತ್ತು ಗುರುದ್ವಾರಗಳ ಸುಮಾರು 1,000 ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಪಲ್ ಕನ್ವೆನ್ಷನ್‌ನ ಸಂಘಟಕ ಗಿರೇಶ್ ಕುಲಕರ್ಣಿ ಮಾತನಾಡಿ, ''ಟೆಂಪಲ್ ಕನೆಕ್ಟ್ ಪ್ರಮುಖ ವೇದಿಕೆಯಾಗಿದ್ದು, ಭಾರತೀಯ ಮೂಲದ ದೇವಾಲಯಗಳಿಗೆ ಸಂಬಂಧಿಸಿದ ದಾಖಲೀಕರಣ, ಡಿಜಿಟಲೀಕರಣ ಮತ್ತು ಮಾಹಿತಿ ವಿತರಣೆಗೆ ಯೋಜನೆ ರೂಪಿಸಿದೆ'' ಎಂದರು. ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಬಹಿರಂಗಪಡಿಸಿದ ಕುಲಕರ್ಣಿ, "ಜುಲೈ 22ರಂದು ಪ್ರಾರಂಭವಾಗುವ ಮೂರು ದಿನಗಳ ಕಾರ್ಯಕ್ರಮ ವಾರಾಣಸಿಯ ರುದ್ರಾಕ್ಷಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್​​ನಲ್ಲಿ ನಡೆಯಲಿದೆ. ಈ ಮೂರು ದಿನಗಳ ಕಾರ್ಯಕ್ರಮದ ಉದ್ದೇಶವು ನೆಟ್ವರ್ಕಿಂಗ್, ಜ್ಞಾನ ಹಂಚಿಕೆ ಮತ್ತು ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ದಕ್ಷ ಪರಿಸರ ವ್ಯವಸ್ಥೆಯನ್ನು ರಚಿಸುವುದು ಆಗಿದೆ" ಎಂದು ಅವರು ಹೇಳಿದರು.

''ದೇವಾಲಯದ ಭದ್ರತೆ, ರಕ್ಷಣೆ ಮತ್ತು ಕಣ್ಗಾವಲು, ನಿಧಿ ನಿರ್ವಹಣೆ, ವಿಪತ್ತು ನಿರ್ವಹಣೆ, ಸ್ವಚ್ಛತೆ ಮತ್ತು ಪಾವಿತ್ರ್ಯತೆ ಹಾಗೂ ಸೈಬರ್ ದಾಳಿಯಿಂದ ರಕ್ಷಿಸಲು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಹಲವಾರು ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮತ್ತು ಮಾಸ್ಟರ್ ತರಗತಿಗಳು ಮತ್ತು ಸಮುದಾಯವನ್ನು ಬೆಳೆಸಲು ಸಾಮಾಜಿಕ ಮಾಧ್ಯಮಗಳ ನಿರ್ವಹಣೆಯನ್ನು ಆಯೋಜಿಸಲಾಗುವುದು. ಜನಸಮೂಹ ಮತ್ತು ಸರತಿ ಸಾಲು ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ ಮತ್ತು ಮೂಲಸೌಕರ್ಯಗಳ ವಿಸ್ತರಣೆಯಂತಹ ವಿಷಯಗಳ ಬಗ್ಗೆಯೂ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು'' ಎಂದು ಕುಲಕರ್ಣಿ ತಿಳಿಸಿದರು.

ಇದನ್ನೂ ಓದಿ:ಇಲ್ಲಿ ಕೇವಲ 5 ರೂಗೆ ಜಿಲೇಬಿ - ಚಹಾ ಜೊತೆಗೆ ಅನ್‌ಲಿಮಿಟೆಡ್ ಗಾಂಥಿಯಾ!

ABOUT THE AUTHOR

...view details