ಕರ್ನಾಟಕ

karnataka

ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್

ETV Bharat / videos

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದರೋಡೆಗೆ ಸ್ಕೆಚ್: ಕೂದಲೆಳೆ ಅಂತರದಲ್ಲಿ ಪಾರಾದ ತರಕಾರಿ ವಾಹನ ಚಾಲಕ - Vehicle driver escaped from problem

By

Published : Aug 19, 2023, 6:16 PM IST

ಮಂಡ್ಯ: ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನದಿನಕ್ಕೂ ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ವಾಹನ ಸವಾರರು ರಾತ್ರಿ ವೇಳೆ ಆತಂಕದಿಂದಲೇ ಸಂಚಾರ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮೈಸೂರಿನಿಂದ ಮದ್ದೂರಿಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ವಾಹನದ ಮೇಲೆ 5 ಮಂದಿ ದರೋಡೆಕೋರರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದು, ಕೂದಲೆಳೆ ಅಂತರದಲ್ಲಿ ವಾಹನ ಚಾಲಕ ಪಾರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮದ್ದೂರು ಪಟ್ಟಣದ ಮಹಾವೀರ ಚಿತ್ರಮಂದಿರದ ಬಳಿ ಇರುವ ನಿಡಘಟ್ಟ ಗ್ರಾಮದ ಪ್ರಸನ್ನ ಅವರ ತರಕಾರಿ ಮಂಡಿಗೆ ಚಂದ್ರು ಮತ್ತು ದಯಾನಂದ್ ಅವರು ಮಂಗಳವಾರ ತಡರಾತ್ರಿ 1.15ರ ಸಮಯದಲ್ಲಿ ಮೈಸೂರಿನ ಎಪಿಎಂಸಿ ಮಾರುಕಟ್ಟೆಯಿಂದ (KA 11 B 4158) ಟಾಟಾ ಏಸ್ ವಾಹನದಲ್ಲಿ ತರಕಾರಿ ತುಂಬಿಕೊಂಡು ಮದ್ದೂರು ಕಡೆಗೆ ಹೊರಟಿದ್ದಾರೆ. ಮಂಡ್ಯ ನಗರದ ಇಂಡುವಾಳು ಸಮೀಪದ ಬೈಪಾಸ್ ರಸ್ತೆಗೆ (ರೈಲ್ವೆ ಸೇತುವೆ ಹತ್ತುವ ವೇಳೆ) ತೆರಳುತ್ತಿದ್ದಂತೆ ರಸ್ತೆ ವಿಭಜಕದಲ್ಲಿ ಇರುವ ಗಿಡಗಳ ಮಧ್ಯೆ ಕುಳಿತಿದ್ದ 5 ಮಂದಿ ದರೋಡೆಕೋರರ ಗುಂಪೊಂದು ವಿವಿಧ ಮಾರಕಾಸ್ತ್ರಗಳೊಂದಿಗೆ ಏಕಾಏಕಿ ಕಲ್ಲುಗಳಿಂದ ಟಾಟಾ ಏಸ್ ವಾಹನದ ಮುಂಭಾಗದ ಗಾಜು ಹಾಗೂ ವಿವಿಧ ಕಡೆಗೆ ಎಸೆದಿದ್ದಾರೆ. ಆದರೆ, ವಾಹನ ಚಾಲಕ ಚಂದ್ರು ವಾಹನ ನಿಲ್ಲಿಸದೆ ಮತ್ತಷ್ಟು ವೇಗವಾಗಿ ವಾಹನ ಚಲಾಯಿಸಿಕೊಂಡು ತೆರಳಿದ ಪರಿಣಾಮ ದರೋಡೆಕೋರರ ದಾಳಿ ಯತ್ನ ವಿಫಲವಾಗಿದೆ.

ಕೆಲ ತಿಂಗಳಲ್ಲೇ ಸಾಕಷ್ಟು ದರೋಡೆ ಪ್ರಕರಣಗಳು ನಡೆಯುತ್ತಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ರಾಮನಗರ ಮತ್ತು ಮಂಡ್ಯ ಜಿಲ್ಲೆಗಳ ಖಾಕಿ ಪಡೆ ಸಾಕಷ್ಟು ಪ್ರಯತ್ನ ಪಡುತ್ತಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಪದೇ ಪದೇ ಇದೇ ರೀತಿ ಘಟನೆಗಳು ಸಂಭವಿಸುತ್ತಿರುವುದು ಸುರಕ್ಷತೆಯ ಬಗ್ಗೆಯೂ ಆತಂಕ ಮೂಡುವಂತೆ ಮಾಡಿದೆ. ವಾಹನ ಸವಾರರು ಒಬ್ಬೊಬ್ಬರೇ ಪ್ರಯಾಣ ಮಾಡುವುದು ಸರಿಯಾದ ಕ್ರಮವಲ್ಲ ಹಾಗೂ ಯಾವುದೇ ಕಾರಣಕ್ಕೂ ರಾತ್ರಿ ವೇಳೆ ವಾಹನ ನಿಲ್ಲಿಸಬೇಡಿ ಎಂದು ಚಾಲಕ ಪ್ರಸನ್ನ ಮನವಿ ಮಾಡಿದ್ದಾರೆ‌.

ಇದನ್ನೂ ಓದಿ :Watch Video: ಬೆಂಗಳೂರಲ್ಲಿ ಹಾಡಹಗಲೇ ಮಾರಕಾಸ್ತ್ರ ತೋರಿಸಿ ಸುಲಿಗೆ!

ABOUT THE AUTHOR

...view details