ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿಯಿಂದ ಮೋಸ, ಕುಮಾರಸ್ವಾಮಿಯಿಂದ ಅಲ್ಲ: ಶಾಸಕ ರವೀಂದ್ರ ಶ್ರೀಕಂಠಯ್ಯ
ಮಂಡ್ಯ: "ಕುಮಾರಸ್ವಾಮಿ ಮಾತುಗಳನ್ನು ಅಪಾರ್ಥ ಮಾಡಿಕೊಳ್ಳಬೇಕಿಲ್ಲ. ಅವರು ಪ್ರಹ್ಲಾದ್ ಜೋಶಿ ಬಗ್ಗೆ ಮಾತನಾಡಿದ್ದಾರೆ, ಬ್ರಾಹ್ಮಣ ಸಮುದಾಯದ ಬಗ್ಗೆ ಏನೂ ಮಾತನಾಡಿಲ್ಲ. ಹಾಗೆ ನೋಡುವುದಾದರೆ ಬ್ರಾಹ್ಮಣ ಪ್ರಾಧಿಕಾರ ಸ್ಥಾಪಿಸಿದ್ದೇ ಕುಮಾರಸ್ವಾಮಿ" ಎಂದು ಶ್ರೀರಂಗಪಟ್ಟಣ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
"ಪದ್ಮನಾಭ ನಗರದಲ್ಲಿ ಬ್ರಾಹ್ಮಣ ಮಹಿಳಾ ಹಾಸ್ಟೆಲ್ಗೆ ಜಾಗ ಮಂಜೂರು ಮಾಡಿದ್ದು ಕುಮಾರಸ್ವಾಮಿ. ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ ಬಿಡುಗಡೆ ಮಾಡಿದವರು ಅವರೇ. ಬಿಜೆಪಿ ಬ್ರಾಹ್ಮಣ ಸಮಾಜವನ್ನು ತುಳಿಯುತ್ತಾ ಬಂದಿದೆ. ಅನಂತ್ ಕುಮಾರ್ ಪತ್ನಿ ಚುನಾವಣೆಗೆ ನಿಲ್ಲದಂತೆ ತಡೆದರು. ಆದ್ರೆ ಸುರೇಶ್ ಅಂಗಡಿ ಪತ್ನಿಗೆ ಟಿಕೆಟ್ ಕೊಟ್ಟು ಇಡೀ ಸರ್ಕಾರವೇ ನಿಂತು ಚುನಾವಣೆ ನಡೆಸಿತು" ಎಂದು ಟೀಕಿಸಿದರು.
"ಬ್ರಾಹ್ಮಣ ಸಮುದಾಯಕ್ಕೆ ಬಿಜೆಪಿ ಸರ್ಕಾರದಿಂದ ಮೋಸ ಆಗಿದೆಯೇ ವಿನಹ ಕುಮಾರಸ್ವಾಮಿಯವರಿಂದಲ್ಲ. ಇವತ್ತಿಗೂ ಶೃಂಗೇರಿ ಮಠದಲ್ಲಿ ಪೂಜೆಯಾಗದೇ ಜೆಡಿಎಸ್ನ ಯಾವುದೇ ಕಾರ್ಯಕ್ರಮ ಆರಂಭವಾಗಲ್ಲ. ಬಿಜೆಪಿಯವರ ಪ್ಲಾನ್ ಏನಿತ್ತೋ ಅದನ್ನು ಕುಮಾರಸ್ವಾಮಿ ಹೇಳಿದ್ದಾರೆ" ಎಂದರು.
ಇದನ್ನೂ ಓದಿ:ರಾಜಕೀಯ ಗೊತ್ತಿಲ್ಲದ ಕಟೀಲ್ ತಮ್ಮ ಹೆಸರನ್ನು ಪಿಟೀಲೆಂದು ಬದಲಿಸಲಿ: ಹೆಚ್‌ಡಿಕೆ