ಕರ್ನಾಟಕ

karnataka

ಸಚಿನ್​ ಪೈಲಟ್​

ETV Bharat / videos

"ಜನಸಂಘರ್ಷ"ಕ್ಕಿಳಿಯುವ ಮುನ್ನ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಿ: ಸಚಿನ್​ ಪೈಲಟ್​ - ಭ್ರಷ್ಟಾಚಾರದ ಪ್ರತ್ಯಾರೋಪ

By

Published : May 16, 2023, 12:44 PM IST

ಜೈಪುರ:ರಾಜಸ್ಥಾನ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಚಿನ್ ಪೈಲಟ್ ಪಕ್ಷದ ವಿರುದ್ಧ ಒಂದಿಲ್ಲೊಂದು ರೀತಿಯಲ್ಲಿ ಬಂಡಾಯ ಸಾರುವ ಮೂಲಕ ಮುಜುಗರಕ್ಕೀಡು ಮಾಡುತ್ತಿರುತ್ತಾರೆ. ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಸಿಎಂ ಅಶೋಕ್​ ಗೆಹ್ಲೋಟ್​ ನೇತೃತ್ವದ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ಕಳೆದ 5 ದಿನಗಳಿಂದ ಅಜ್ಮೀರ್​ನಿಂದ ಜೈಪುರಕ್ಕೆ ಜನಸಂಘರ್ಷ ಯಾತ್ರೆ ನಡೆಸಿದ್ದಾರೆ.

ಇದೀಗ ಯಾತ್ರೆ ಮುಕ್ತಾಯವಾಗಿದ್ದು, 15 ದಿನಗಳೊಳಗೆ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ರಾಜ್ಯದ ಜನರನ್ನು ಸಂಘಟಿಸಿ ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಇದೇ ವೇಳೆ ಸಚಿನ್​ ಪೈಲಟ್​ ವಿರುದ್ಧವೇ ಸಿಎಂ ಅಶೋಕ್​ ಗೆಹ್ಲೋಟ್​ ಭ್ರಷ್ಟಾಚಾರದ ಪ್ರತ್ಯಾರೋಪ ಮಾಡಿದ್ದಾರೆ. ಇದನ್ನು ತಳ್ಳಿಹಾಕಿರುವ ಸಚಿನ್ ಪೈಲಟ್ ಈಟಿವಿ ಭಾರತ್​ದೊಂದಿಗೆ ಸವಿಸ್ತಾರವಾಗಿ ಮಾತನಾಡಿದ್ದಾರೆ. ಮೇ 11 ರಿಂದ 15 ರವರೆಗೆ ಅಜ್ಮೀರ್​ನಿಂದ ಜೈಪುರಕ್ಕೆ 5 ದಿನ ಜನಸಂಘರ್ಷ ಯಾತ್ರೆ ಪೂರೈಸಿದ್ದಾರೆ. ಸಾವಿರಾರು ಜನರು ಯಾತ್ರೆಯಲ್ಲಿ ಪಾಲ್ಗೊಂಡು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ.

ಓದಿ:6 ಜಿ ತಂತ್ರಜ್ಞಾನ ಅಭಿವೃದ್ಧಿ ಮಾಡುವಂತೆ ಸಿಸ್ಕೋಗೆ ಸೂಚನೆ ನೀಡಿದ ಪ್ರಧಾನಿ

ABOUT THE AUTHOR

...view details