ಕರ್ನಾಟಕ

karnataka

ETV Bharat / videos

ಗಣರಾಜ್ಯೋತ್ಸವ ವೇದಿಕೆಯಲ್ಲಿ ಚಿತ್ರಗೀತೆ ಹಾಡಿದ ತಹಶೀಲ್ದಾರ್: ವಿಡಿಯೋ ವೈರಲ್​ - ಶಿವಮೊಗ್ಗ ಜಿಲ್ಲೆ ಭದ್ರಾವತಿ

By

Published : Jan 27, 2023, 4:33 PM IST

Updated : Feb 3, 2023, 8:39 PM IST

ಶಿವಮೊಗ್ಗ:ಗಣರಾಜ್ಯೋತ್ಸವದ ವೇದಿಕೆಯಲ್ಲಿ ತಹಶೀಲ್ದಾರ್ ಅವರು ಚಲನಚಿತ್ರ ಗೀತೆ ಹಾಡಿರುವ ವಿಡಿಯೋ ಭಾರಿ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ನಿನ್ನೆ(ಜ.26) ಭದ್ರಾವತಿಯ ಕನಕ ಮಂಟಪದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಗಿದ ನಂತರ ವೇದಿಕೆಯಲ್ಲಿದ್ದ ಗಣ್ಯರ ನಡುವೆ ತಹಶೀಲ್ದಾರ್ ಅವರು ಮೈಕ್ ಹಿಡಿದು ಹಾಡು ಹೇಳಲು ಪ್ರಾರಂಭಿಸಿದ್ದಾರೆ.

ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಅವರು ಯಾರೇ ನೀನು ರೋಜಾ ಹೂವೆ..ಎಂಬ ಹಾಡನ್ನು ಹಾಡಿದ್ದಾರೆ. ಇದಕ್ಕೆ ಅಲ್ಲಿ ನೆರೆದಿದ್ದ ಶಿಕ್ಷಕರು‌ ಸೇರಿದಂತೆ ಇತರರು ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ವೈರಲ್​ ಆಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Last Updated : Feb 3, 2023, 8:39 PM IST

ABOUT THE AUTHOR

...view details