ಬಯಲು ಜೈಲಿನಲ್ಲಿ ಖೈದಿಗಳಿಂದ ಸಾವಯವ ಕೃಷಿ, ಹೈನುಗಾರಿಕೆ: ವಿಡಿಯೋ ನೋಡಿ
ಶಿವಗಂಗಾ (ತಮಿಳುನಾಡು): ಸಾಮಾನ್ಯವಾಗಿ ನಾವು ಖೈದಿಗಳನ್ನು ಜೈಲಿನಲ್ಲಿ ನೋಡುತ್ತೇವೆ. ಜೈಲಿನಲ್ಲಿರಿಸಿಕೊಂಡೇ ಅವರಿಂದ ವಿವಿಧ ರೀತಿಯ ಕೆಲಸಗಳನ್ನು ಮಾಡಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಕೂಲಿಯನ್ನು ನೀಡಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ಸುಮಾರು 50ಕ್ಕೂ ಹೆಚ್ಚು ಖೈದಿಗಳನ್ನು ಕರೆದುಕೊಂಡು ಬಂದು ಕೃಷಿ ಮಾಡಿಸಲಾಗುತ್ತಿದೆ. ಇಲ್ಲಿನ ಶಿವಗಂಗಾ ಜಿಲ್ಲೆಯಲ್ಲಿ ಬಯಲು ಜೈಲಿನಲ್ಲಿ ಖೈದಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಖೈದಿಗಳನ್ನು ಅವರ ಉತ್ತಮ ನಡವಳಿಕೆಯ ಆಧಾರದ ಮೇಲೆ ಇಲ್ಲಿಗೆ ಕರೆತರಲಾಗಿದೆ. ಸಾವಯವ ಕೃಷಿಯ ಮೂಲಕ ಕಬ್ಬು, ತೆಂಗು, ಪೇರಳ, ವಿವಿಧ ತರಕಾರಿಗಳನ್ನು ಇವರು ಬೆಳೆಯುತ್ತಿದ್ದಾರೆ. ಹೈನುಗಾರಿಕೆಯಲ್ಲಿಯೂ ತೊಡಗಿದ್ದು ಹಸು, ಕೋಳಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಕಾರಾಗೃಹದ ಡಿಐಜಿ ಪಳನಿ, "ಜೈಲಿನಲ್ಲಿ ಉತ್ತಮ ನಡವಳಿಕೆ ಹೊಂದಿದ್ದ 50ಕ್ಕೂ ಹೆಚ್ಚು ಖೈದಿಗಳನ್ನು ಇಲ್ಲಿಗೆ ಕರೆ ತಂದು ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ. ಕಬ್ಬು, ತೆಂಗು, ಪೇರಳ ಮತ್ತು ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಹಸು, ಕೋಳಿ, ಮೇಕೆ ಸಾಕಣೆ ಮಾಡುತ್ತಿದ್ದಾರೆ. ಕೃಷಿಗೆ ಬೇಕಾದ ಸಾವಯವ ಗೊಬ್ಬರವನ್ನು ಇಲ್ಲೇ ತಯಾರಿಸುತ್ತಾರೆ."
"ಇದರಿಂದ ಶಿಕ್ಷೆಯ ನಂತರ ಅವರಿಗೆ ಸಾಮಾಜಿಕವಾಗಿ ಬೆರೆಯಲು ಸಹಕಾರಿಯಾಗುತ್ತದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಬೆಳೆಗಳನ್ನು ಬೆಳೆದು ಕಾರಾಗೃಹಕ್ಕೆ ಪೂರೈಕೆ ಮಾಡಿ, ಹೆಚ್ಚುವರಿ ಬೆಳೆಗಳನ್ನು ಮಾರುಕಟ್ಟೆಗೆ ಮಾರಾಟ ಮಾಡಲಾಗುತ್ತದೆ. ಇದಕ್ಕೆ ಖೈದಿಗಳನ್ನು ಕೂಲಿಯನ್ನು ನೀಡಲಾಗುತ್ತದೆ" ಎಂದು ಅವರು ಹೇಳಿದರು.
ಇದನ್ನೂ ಓದಿ :ರಾಮನಗರ: ಕರ್ತವ್ಯ ವೇಳೆಯಲ್ಲೇ 'ಗುಂಡು' ಹಾಕಿದ ಎಎಸ್ಐ; ಮೂವರು ಸಸ್ಪೆಂಡ್!