ಕರ್ನಾಟಕ

karnataka

ಪ್ರಕಾಶ್ ಸಿಂಗ್ ಬಾದಲ್ ಅವರ ಅಂತಿಮ ಸಂಸ್ಕಾರ

ETV Bharat / videos

ಸಕಲ ಸರ್ಕಾರಿ ಗೌರವಗಳೊಂದಿಗೆ ಪ್ರಕಾಶ್ ಸಿಂಗ್ ಬಾದಲ್ ಅಂತ್ಯಸಂಸ್ಕಾರ - ETV Bharat kannada News

By

Published : Apr 27, 2023, 5:41 PM IST

ಪಂಜಾಬ್ : ಶಿರೋಮಣಿ ಅಕಾಲಿದಳದ ಸಂಸ್ಥಾಪಕ ಹಾಗೂ ಪಂಜಾಬ್‌ನ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್ ಸಿಂಗ್ ಬಾದಲ್ (95) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರು ಕಳೆದ ಎರಡು ದಿನಗಳಿಂದ ಏಪ್ರಿಲ್ 25 ರಂದು ಮೊಹಾಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಇಂದು ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅವರ ಜಮೀನಿನಲ್ಲೇ ಅಂತ್ಯಕ್ರಿಯೆ ನಡೆದಿದೆ. 

ಇದಕ್ಕೂ ಮುನ್ನ ಪ್ರಕಾಶ್ ಸಿಂಗ್ ಬಾದಲ್ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಚಂಡೀಗಢದಲ್ಲಿ ಅವರ ಪಾರ್ಥಿವ ಶರೀರವನ್ನು ಕೆಲಕಾಲ ಇರಿಸಲಾಗಿತ್ತು. ನಂತರ ನಿನ್ನೆ (ಬುಧವಾರ) ರಾತ್ರಿ ಪಾರ್ಥಿವ ಶರೀರವನ್ನು ಮುಕ್ತಸರ್ ಜಿಲ್ಲೆಯ ಬಾದಲ್ ಗ್ರಾಮಕ್ಕೆ ತರಲಾಯಿತು. ಈ ವೇಳೆ, ಪಾರ್ಥಿವ ಶರೀರ ಹೊತ್ತ ವಾಹನವು ಬಾದಲ್ ಗ್ರಾಮಕ್ಕೆ ತೆರಳಿದಾಗ ಪಕ್ಷದ ಬೆಂಬಲಿಗರು ಮತ್ತು ಅನೇಕ ಜನಸಾಮಾನ್ಯರು ಎರಡೂ ಬದಿಯಲ್ಲಿ ನಿಂತು ತಮ್ಮ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದರು. ಪ್ರಕಾಶ್ ಸಿಂಗ್ ಬಾದಲ್ ಅವರ ಆಕಲಿಕೆಯಿಂದಾಗಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಇನ್ನು ಹಲವು ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.  

ಇದನ್ನೂ ಓದಿ :ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಅಂತ್ಯಕ್ರಿಯೆಗೆ ಆಗಮಿಸುತ್ತಿರುವ ಗಣ್ಯರು

ABOUT THE AUTHOR

...view details