ರೋಹಿಣಿ vs ರೂಪಾ: ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ- ಸಚಿವ ಪ್ರಹ್ಲಾದ್ ಜೋಶಿ - ಈಟಿವಿ ಭಾರತ ಕನ್ನಡ
ಧಾರವಾಡ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ನಡುವಿನ ಸೋಶಿಯಲ್ ಮೀಡಿಯಾ ವಾರ್‌ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿ, "ಇದು ಬಹಳ ಅನಾರೋಗ್ಯಕರ ಬೆಳವಣಿಗೆ. ಇವರ ಮೇಲೆ ಸಿಎಂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪರಸ್ಪರರ ಮೇಲೆ ದೂರುಗಳಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಬೇಕು. ರಸ್ತೆಯಲ್ಲಿ ನಿಂತು ಸ್ಟೇಟ್‌ಮೆಂಟ್ ಕೊಡೋದು ಸರಿಯಲ್ಲ" ಎಂದರು.
"ಈಗ ನಮ್ಮ ವಿರುದ್ಧ ಕಾಂಗ್ರೆಸ್‌ನವರು ಆರೋಪ ಮಾಡ್ತಾರೆ. ನಾವು ಅವರ ವಿರುದ್ಧ ಆರೋಪ ಮಾಡ್ತೇವೆ, ಇದು ಪೊಲಿಟಿಕಲ್ ಸಿಸ್ಟಮ್. ಆದರೆ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟ, ಪತ್ರಿಕಾ ಹೇಳಿಕೆ ಕೊಡುವುದು, ಟ್ವೀಟ್ ಮಾಡುವುದು ಸರಿಯಲ್ಲ. ಸಿಎಂ ಅವರನ್ನು ನಾನು ರಾತ್ರಿ ಭೇಟಿ ಮಾಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ಅವರು ಬೇಗ ಗುಣಮುಖರಾಗಲಿ, ವೈಯಕ್ತಿಕ ತೇಜೋವಧೆ ಸರಿಯಲ್ಲ: ರೋಹಿಣಿ ಸಿಂಧೂರಿ