ಕರ್ನಾಟಕ

karnataka

ಪಂಜಾಬ್​ದಲ್ಲಿ ಪ್ರವಾಹದಲ್ಲಿ ಜಲಾವೃತಗೊಂಡ ಕಂಬಗಳು,ವಿದ್ಯುತ್ ಗ್ರಿಡ್​ಗಳು.

ETV Bharat / videos

ಪಂಜಾಬ್​ದಲ್ಲಿ ವಿದ್ಯುತ್ ಕ್ಷಾಮ...! ಗ್ರಿಡ್‌ಗಳು ಜಲಾವೃತ, ವಿದ್ಯುತ್ ಪೂರೈಕೆಗೆ ಪಿಎಸ್‌ಪಿಸಿಎಲ್ ಶತಪ್ರಯತ್ನ - ಗ್ರಿಡ್‌ಗಳು ಜಲಾವೃತ

By

Published : Jul 15, 2023, 5:39 PM IST

ಚಂಡೀಗಢ:ಪಂಜಾಬ್‌ನಲ್ಲಿ ಭಾರೀ ಮಳೆ ಬೀಳುತ್ತಿರುವ ಹಿನ್ನೆಲೆ ಪ್ರವಾಹ ಸಂಭವಿಸಿದ್ದು,ಪ್ರವಾಹದಿಂದಾಗಿ ವಿವಿಧೆಡೆ ಸಂಪರ್ಕ ಕಡಿತಗೊಂಡಿದೆ. ಪಂಜಾಬ್ ಪವರ್​ಕಾಮ್​ದ ಬಹಳಷ್ಟು ಗ್ರಿಡ್‌ಗಳು ಜಲಾವೃತಗೊಂಡಿದ್ದು, ಬಹಳಷ್ಟು ಗ್ರಾಮಗಳು ಮತ್ತು ನಗರಗಳಲ್ಲಿ ವಿದ್ಯುತ್ ವ್ಯತ್ಯಯವುಂಟಾಗಿ, ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. 

ದಕ್ಷಿಣ ಮತ್ತು ಉತ್ತರ ಪಂಜಾಬ್‌ ಪ್ರದೇಶವೂ ಸಂಪೂರ್ಣ ಪ್ರವಾಹಕ್ಕೆ ಒಳಗಾಗಿದೆ.  ಪ್ರವಾಹದಿಂದ ಟ್ರಾನ್ಸ್‌ಫಾರ್ಮರ್‌ಗಳು, ಕಂಬಗಳು, ತಂತಿಗಳು ಹಾನಿಗೊಳಗಾಗಿದ್ದು, ಪಂಜಾಬ್‌ನ ಉತ್ತರ ಮತ್ತು ದಕ್ಷಿಣ ವಲಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.  ಉತ್ತರ ವಲಯದ ಪಂಜಾಬ್ ಪವರ್​ಕಾಮ್ ಮುಖ್ಯ ಇಂಜಿನಿಯರ್ ಸೇರಿ ಅಧಿಕಾರಿಗಳು ಜಲಂಧರ್ ವ್ಯಾಪ್ತಿ ಪ್ರದೇಶಗಳಿಗೆ ತೆರೆಳಿ ಸಮೀಕ್ಷೆ ನಡೆಸಿದರು.  ಶಾಹಕೋಟ್, ಲೋಹಿಯಾನ್, ಗಿಡ್ಡಾರ್ಪಿಂಡಿ, ಕಕ್ಕರ್ ಕಲನ್, ಇಸ್ಮಾಯಿಲ್‌ಪುರ, ಕಮಲಾಪುರ, ಜಕ್ಕೋಪುರ್ ಪುನಿಯಾ, ಭಾಗೋಬುದ್ಧ, ಸುಲ್ತಾನ್‌ಪುರ ಲೋಧಿ ಮುಂತಾದೆಡೆ ಭೇಟಿ ನೀಡಿ ಪರಿಶೀಲಿಸಿದರು. ಮುಖ್ಯವಾಗಿ 18 ಗ್ರಾಮಗಳು ಸಂಪೂರ್ಣ ನೀರಿನಲ್ಲಿ ಮುಳುಗಿರುವ ಕಾರಣ  66 ಕೆ ವಿ  ಮೆಹರಜ್ವಾಲಾ ವಿದ್ಯುತ್ ಕೇಂದ್ರವನ್ನು ಇನ್ನೂ ಮರುಸ್ಥಾಪನೆ ಮಾಡಿಲ್ಲ. 

 66 ಕೆವಿ ಮೆಹರಜ್ವಾಲಾ ವಿದ್ಯುತ್ ಕೇಂದ್ರ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರಿಂದ 66ಕೆವಿ ಸಬ್ ಸ್ಟೇಷನ್ ಸ್ಥಗಿತಗೊಂಡು, 36 ಗ್ರಾಮಗಳಲ್ಲಿ ಕತ್ತಲೆ ಆವರಿಸಿದೆ. 66ಕೆವಿ ಸಬ್ ಸ್ಟೇಷನ್ ಜಕ್ಕೋಪುರ ಪುನಿಯಾ ಮತ್ತು 66 ಕೆವಿ ಸಬ್ ಸ್ಟೇಷನ್ ಜುಲೈ 12 ರೊಳಗೆ ಉಪಕೇಂದ್ರ ಭಾಗೋಬುದ್ಧದಿಂದ ಸುಮಾರು 36 ಪೀಡಿತ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸಲಾಗಿದೆ. ಈ ಪ್ರದೇಶಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಅಲ್ಲಿಗೆ ಅಧಿಕಾರಿಗಳ ತಂಡಗಳನ್ನು ಕಳುಹಿಸಲಾಗುತ್ತಿದೆ. ಜನವಸತಿ ಪ್ರದೇಶಗಳಿಗೆ ಆದಷ್ಟು ಬೇಗ ಸಮರ್ಪಕ ವಿದ್ಯುತ್ ಪೂರೈಸಲು ಪ್ರಯತ್ನಿಸಲಾಗುತ್ತಿದೆ. 

 ದಕ್ಷಿಣ ವಲಯದ ಮುಖ್ಯ ಎಂಜಿನಿಯರ್‌ ಡಿ.ಎಸ್‌.ಬಂಗಾರ್‌ ಮಾಹಿತಿ ಪ್ರಕಾರ, ಅಪಾರ ಮಳೆ ಪ್ರವಾಹವುಂಟಾಗಿ ಇನ್ನೂ ನೀರು ಹರಿದು ಬರುತ್ತಿದೆ. ರೋಪರ್, ಮೊಹಾಲಿ, ಜಿರಾಕ್‌ಪುರ್ ಮತ್ತು ಪಟಿಯಾಲದ ಮೊದಲು ಜಲಾವೃತಗೊಂಡ ಪ್ರದೇಶಗಳಲ್ಲಿ ವಿದ್ಯುತ್​​ನ್ನು ಮರುಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆ. 

ನಾಳೆಯ ವೇಳೆಗೆ ಪಿಎಸ್ ಪಿ ಸಿ ಎಲ್  ಸಿರ್ಹಿಂದ್ ಉಪ ವಿಭಾಗದ ತಂಡವು ವಾಜಿರಾಬಾದ್‌ನಲ್ಲಿ ಪ್ರವಾಹದ ನೀರಿನ ಹರಿವು ಕಡಿಮೆಯಾಗಲಿದ್ದು, ಎಲ್ಲ ಕೈಗಾರಿಕೆ ಫೀಡರ್‌ಗಳಿಗೆ ವಿದ್ಯುತ್ ಪೂರೈಕೆ ಮರುಸ್ಥಾಪನೆ ಮಾಡಲು ಪಿಎಸ್ ಪಿ ಸಿ ಎಲ್ ಪವರ್‌ಕಾಮ್ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದನ್ನೂಓದಿ:Patna Lathi Charge case: ಸಿಎಂ ನಿತೀಶ್ ಕುಮಾರ್​, ಡಿಸಿಎಂ ತೇಜಸ್ವಿ ಯಾದವ್ ಸೇರಿದಂತೆ 6 ಮಂದಿ ವಿರುದ್ಧ ದೂರು

ABOUT THE AUTHOR

...view details