ಜಪಾನ್ನಿಂದ ಪಪುವಾ ನ್ಯೂಗಿನಿಗೆ ಹೊರಟ ಪ್ರಧಾನಿ ಮೋದಿ: ವಿಡಿಯೋ
ಹಿರೋಶಿಮಾ (ಜಪಾನ್) :ಇಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋ ಪೆಸಿಫಿಕ್ ಪುಟ್ಟ ರಾಷ್ಟ್ರವಾದ ಪಪುವಾ ನ್ಯೂಗಿನಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಇಂದು ಬೆಳಗ್ಗೆ ಜಪಾನ್ ಅಧಿಕಾರಿಗಳು ಮೋದಿಗೆ ಬೀಳ್ಕೊಡುಗೆ ಕೊಟ್ಟರು.
ಜಪಾನ್ನಲ್ಲಿ ಎರಡು ದಿನಗಳ ಕಾಲ ನಡೆದ ಜಿ7 ಶೃಂಗದಲ್ಲಿ ವಿಶ್ವ ನಾಯಕರ ಜೊತೆಗೆ ದ್ವಿಪಕ್ಷೀಯ ಸಭೆ ನಡೆಸಿದ ಮೋದಿ, ಉಕ್ರೇನ್ ಯುದ್ಧ ನಿಲುಗಡೆಗೆ ಸರ್ವಪ್ರಯತ್ನ ನಡೆಸುವುದಾಗಿ ಹೇಳಿದರು. ಇದು ವಿಶ್ವದಾದ್ಯಂತ ಭಾರಿ ಸುದ್ದಿಯಾಗಿದೆ.
ಇದೀಗ ಜಪಾನ್ ಪ್ರವಾಸದ ಬಳಿಕ ಮೋದಿ ಅವರು ಪಪುವಾ ನ್ಯೂಗಿನಿಗೆ ತೆರಳುತ್ತಿದ್ದಾರೆ. ಇದು ಅವರ ಮೊದಲ ಪ್ರವಾಸವಲ್ಲದೇ, ಇಂಡೋ ಪೆಸಿಫಿಕ್ ದೇಶಕ್ಕೆ ಯಾವುದೇ ಭಾರತೀಯ ಪ್ರಧಾನಿಯ ಮೊದಲ ಭೇಟಿಯೂ ಹೌದು. ದೇಶಕ್ಕೆ ಆಗಮಿಸುತ್ತಿರುವ ಭಾರತದ ಪ್ರಧಾನಿಯನ್ನು ಸಂಪ್ರದಾಯ ಮುರಿದು ವಿಧ್ಯುಕ್ತವಾಗಿ ಬರಮಾಡಿಕೊಳ್ಳಲು ದೇಶ ಸಜ್ಜಾಗಿದೆ.
ಪಪುವಾ ನ್ಯೂಗಿನಿಗೆ ಬರುವ ಯಾವುದೇ ನಾಯಕರಿಗೆ ಅದ್ಧೂರಿ ಸ್ವಾಗತ ನೀಡುವುದಿಲ್ಲ. ಆದರೆ, ಮೋದಿ ಅವರಿಗೆ ಈ ವಿಶೇಷ ವಿನಾಯಿತಿ ನೀಡಲು ದೇಶ ಸಿದ್ಧತೆ ನಡೆಸುತ್ತಿದ್ದು, ಅವರಿಗೆ ಪೂರ್ಣ ಪ್ರಮಾಣದಲ್ಲಿ ಭವ್ಯ ಸ್ವಾಗತ ಕೋರಲು ನಿರ್ಧರಿಸಿದೆ.
ಇದನ್ನೂ ಓದಿ:ಮೂರು ದೇಶಗಳ ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ವಿಶೇಷ ಗೌರವ: ಏನೇನು ಗೊತ್ತಾ?