ಹಿಮಾಚಲ ಪ್ರದೇಶ: ಮಳೆ ಅಬ್ಬರಕ್ಕೆ ಟ್ರ್ಯಾಕ್ಟರ್ ಸಹಿತ ನದಿ ಮಧ್ಯೆ ಸಿಲುಕಿದ ಯುವಕ..ಸ್ಥಳೀಯರಿಂದ ರಕ್ಷಣೆ - ಹಿಮಾಚಲ ಪ್ರದೇಶದ ಚಂಬಿ ಖಾಡ್‌ನಲ್ಲಿ ಭಾರಿ ಮಳೆ
ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ತನ್ನ ಭೀಕರ ಸ್ವರೂಪವನ್ನು ತೋರಿಸಲಾರಂಭಿಸಿದೆ. ಭಾರಿ ಮಳೆಯಿಂದಾಗಿ ನದಿ, ತೊರೆಗಳು ಕೂಡ ಉಕ್ಕಿ ಹರಿಯುತ್ತಿದ್ದು, ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಶಹಾಪುರದ ಚಂಬಿ ಖಾಡ್‌ನಲ್ಲಿ ಯುವಕನೊಬ್ಬ ತನ್ನ ಟ್ರ್ಯಾಕ್ಟರ್ ತೆಗೆದುಕೊಂಡು ಮರಳು ಮತ್ತು ಜಲ್ಲಿಕಲ್ಲು ತುಂಬಿಸಲು ಹೋಗಿದ್ದಾನೆ. ಆದರೆ, ನಂತರ ಮಳೆ ಸುರಿದು ರಭಸವಾಗಿ ನೀರು ಹರಿದಿದ್ದರಿಂದ ಯುವಕ ಅಲ್ಲಿಯೇ ಸಿಲುಕಿಕೊಂಡಿದ್ದಾನೆ. ಟ್ರ್ಯಾಕ್ಟರ್ ಟ್ರಾಲಿಯ ಮೇಲ್ಭಾಗಕ್ಕೆ ಪ್ರವಾಹದ ನೀರು ನುಗ್ಗಿದ್ದು,ಯುವಕ ತನ್ನ ಪ್ರಾಣ ಉಳಿಸಿಕೊಳ್ಳಲು ಅಲ್ಲಿನ ಜನರನ್ನು ಕೂಗಿಕೊಂಡಿದ್ದಾನೆ. ಅಷ್ಟರಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ಆತನನ್ನು ದಡ ತಲುಪಿಸಿದ್ದಾರೆ.
Last Updated : Feb 3, 2023, 8:24 PM IST