ಸಾಂಸ್ಕೃತಿಕ ನಗರಿಯಲ್ಲಿ ಹಸಿರು ಪಟಾಕಿ ಕೊಳ್ಳಲು ಜನರ ನಿರಾಸಕ್ತಿ: ಸಂಕಷ್ಟದಲ್ಲಿ ಪಟಾಕಿ ವ್ಯಾಪಾರಸ್ಥರು - ಪಟಾಕಿ ಮಾರಾಟ
Published : Nov 13, 2023, 5:35 PM IST
ಮೈಸೂರು :ದೀಪಾವಳಿ ಆಚರಣೆಗೆ ಹಸಿರು ಪಟಾಕಿ ಕೊಳ್ಳಲು ಮೈಸೂರಿನ ಜನರು ನಿರಾಸಕ್ತಿ ತೋರಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಪಟಾಕಿ ಅಂಗಡಿ ತೆರೆದಿರುವ ಮಾಲೀಕರಿಗೆ ವ್ಯಾಪಾರ ಆಗದೇ ಕಂಗಾಲಾಗಿದ್ದಾರೆ. ಪಟಾಕಿ ವ್ಯಾಪಾರದ ಬಗ್ಗೆ ವ್ಯಾಪಾರಸ್ಥರು ತಮ್ಮ ಸಂಕಷ್ಟವನ್ನ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ದೀಪಾವಳಿ ಎಂದರೆ ದೀಪದ ಜೊತೆಗೆ ಪಟಾಕಿ ಸದ್ದಿನ ಹಬ್ಬ. ಇಂತಹ ದೀಪಾವಳಿ ಆಚರಿಸಲು ಜನರು ಪಟಾಕಿ ಖರೀದಿಗೆ ಪ್ರತಿ ವರ್ಷ ಮುಗಿಬೀಳುತ್ತಾರೆ. ಆದರೆ ಇತ್ತೀಚಿಗೆ ಪಟಾಕಿ ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂಬ ಆಜ್ಞೆಯ ಹಿನ್ನೆಲೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ತಂದು ಮಾರಾಟ ಮಾಡಲು, ನಗರದ ಜೆ ಕೆ ಮೈದಾನ ಸೇರಿದಂತೆ ಬಡಾವಣೆಗಳಲ್ಲಿ ತಾತ್ಕಾಲಿಕ ಹಸಿರು ಪಟಾಕಿ ಮಳಿಗೆಗಳನ್ನ ತೆರೆಯಲಾಗಿದೆ.
ಆದರೆ, ಇತ್ತೀಚಿಗೆ ಬೆಂಗಳೂರಿನ ಬಳಿಯ ಅತ್ತಿಬೆಲೆ ಪಟಾಕಿ ದುರಂತ, ದೆಹಲಿಯ ವಾಯು ಮಾಲಿನ್ಯ ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜನಜಾಗೃತಿ ಉಂಟಾಗಿರುವುದರಿಂದ ಜನರಲ್ಲಿ ಪಟಾಕಿ ಖರೀದಿಗೆ ನಿರಾಸಕ್ತಿ ಉಂಟಾಗಿದೆ. ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಅಂಗಡಿ ತೆರೆದಿರುವ ವ್ಯಾಪಾರಸ್ಥರು ವ್ಯಾಪಾರವಿಲ್ಲದೇ ಕಂಗಾಲಾಗಿದ್ದು, ತಮ್ಮ ಅಳಲನ್ನು ಈಟಿವಿ ಭಾರತದ ಜತೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ :ಹಸಿರು ಪಟಾಕಿ ಬಗ್ಗೆ ಪರಿಸರವಾದಿ ಹೇಳಿದ್ದೇನು?: ರಮೇಶ್ ಕಿಕ್ಕೇರಿ ಜೊತೆ ಈಟಿವಿ ಭಾರತ ಸಂದರ್ಶನ