ತುಮಕೂರು: ರೈಲಿನ ಹತ್ತನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಪ್ರಯಾಣಿಕರು - ರೈಲ್ವೆ ಪ್ರಯಾಣಿಕರ ವೇದಿಕೆ
ತುಮಕೂರು: ರೈಲ್ವೆ ಪ್ರಯಾಣಿಕರಿಂದ ಇಂದು ತುಮಕೂರು ರೈಲ್ವೆ ನಿಲ್ದಾಣದಲ್ಲಿ ನಿತ್ಯ ಸಂಚರಿಸುವ ತುಮಕೂರು ಹಾಗೂ ಬೆಂಗಳೂರು ನಡುವಿನ ರೈಲಿನ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. 2013ರ ಆಗಸ್ಟ್ 3 ರಂದು ಪ್ರಯಾಣಿಕರ ಅನುಕೂಲಕ್ಕಾಗಿ ತುಮಕೂರಿನಿಂದ ಬೆಂಗಳೂರಿಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ರೈಲಿನ ವ್ಯವಸ್ಥೆ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳುವ ತುಮಕೂರಿನ ಅನೇಕ ಪ್ರಯಾಣಿಕರು ಇದರ ಸವಿನೆನಪಿಗಾಗಿ ಪ್ರತಿ ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
ಅದೇ ರೀತಿ ಇಂದು ಕೂಡ ರೈಲಿನ ಹತ್ತನೇ ವರ್ಷದ ಹುಟ್ಟುಹಬ್ಬವನ್ನು ಪ್ರಯಾಣಿಕರೆಲ್ಲ ಸೇರಿ ಅದ್ಧೂರಿಯಿಂದ ಆಚರಿಸಿದ್ದಾರೆ. ಪ್ರಯಾಣಿಕರಾದ ವಿದ್ಯಾ, ಬೆಂಗಳೂರಿಗೆ ಸಂಚರಿಸುವ ರೈಲಿಗೆ ತಳಿರು ತೋರಣಗಳನ್ನು ಕಟ್ಟಿ, ಹೂಗಳಿಂದ ಸಿಂಗಾರ ಮಾಡಿದ್ದರು. ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ಆಚರಿಸಲಾದ ಈ ಬರ್ತಡೇ ಸಂಭ್ರಮಾಚರಣೆಯಲ್ಲಿ ಕೇಕ್ ಅನ್ನು ಕತ್ತರಿಸಿ ರೈಲ್ವೆ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಹಾಗೂ ಪ್ರಯಾಣಿಕರು ಖುಷಿಪಟ್ಟರು.
ಇದನ್ನೂ ನೋಡಿ:ಬೆಂಗಳೂರು - ಧಾರವಾಡ ವಂದೇ ಭಾರತ್ ರೈಲು ಸೇವೆಗೆ ಜನರಿಂದ ಉತ್ತಮ ಸ್ಪಂದನೆ..