ಮುದ್ದೇಬಿಹಾಳ: ಮೈನವಿರೇಳಿಸಿದ ಜೋಡೆತ್ತುಗಳ ದಿಂಡಿನ ರೇಸ್ - Ox race
ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದಲ್ಲಿ ಶ್ರೀ ಬಾಲೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಜೋಡೆತ್ತುಗಳ ದಿಂಡಿನ ರೇಸ್ ರೈತರು, ಗ್ರಾಮಸ್ಥರನ್ನು ರೋಮಾಂಚನಗೊಳಿಸಿತು. ಸ್ಪರ್ಧೆಯಲ್ಲಿ ಒಟ್ಟು ಆರು ಜೋಡೆತ್ತುಗಳು ಭಾಗಿಯಾಗಿದ್ದವು. 500 ಮೀಟರ್ ದೂರವನ್ನು ಕ್ರಮಿಸಲು ನಿಗದಿತ ಸಮಯ ನೀಡಲಾಗಿತ್ತು. ಅದರಲ್ಲಿ ಎಸ್.ಕೆ.ಕೊಪ್ಪ ಗ್ರಾಮದ ಎತ್ತುಗಳು ಪ್ರಥಮ ಸ್ಥಾನ ಪಡೆದುಕೊಂಡರೆ, ಚಲಮಿಯ ಅನಿಲ್ ಗೌಡರ ಎತ್ತುಗಳು ದ್ವಿತೀಯ ಸ್ಥಾನ ಪಡೆದುಕೊಂಡವು. ಪ್ರಥಮ ಬಹುಮಾನವಾಗಿ 15 ಸಾವಿರ ರೂ. ಹಾಗೂ 7 ಸಾವಿರ ರೂ. ದ್ವಿತೀಯ ಬಹುಮಾನವಾಗಿ ನೀಡಲಾಯಿತು.
Last Updated : Feb 3, 2023, 8:22 PM IST