ತುಮಕೂರು... ಹಳೆಯ ವಸ್ತು ತುಂಬಿದ್ದ ಕೊಠಡಿಗೆ ಬೆಂಕಿ : ಓರ್ವ ಸಜೀವ ದಹನ - ಹಳೆಯ ವಸ್ತು ತುಂಬಿದ್ದ ಕೊಠಡಿಗೆ ಬೆಂಕಿ
Published : Nov 2, 2023, 5:21 PM IST
|Updated : Nov 2, 2023, 6:01 PM IST
ತುಮಕೂರು:ಹಳೆಯ ವಸ್ತು ತುಂಬಿದ್ದ ಕೊಠಡಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕೊಠಡಿಯಲ್ಲಿ ಮಲಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿರೋ ಘಟನೆ ತುಮಕೂರಿನ ಹೊರವಲಯದ ಕ್ಯಾತಸಂದ್ರದಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಕೊಠಡಿಗೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬಳಿಕ ಕೊಠಡಿ ಒಳ ಹೋಗಿ ನೋಡಿದ್ದ ವೇಳೆ ವ್ಯಕ್ತಿಯ ಶವ ಪತ್ತೆಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತ ದೇಹ ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಪೊಲೀಸರಿಂದ ತನಿಖೆ ಮುಂದುವರೆದಿದೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಪಾಂಜ್ ತ್ಯಾಜ್ಯಕ್ಕೆ ಬೆಂಕಿ:ಬೆಂಗಳೂರಿನಫ್ಯಾಕ್ಟರಿಯೊಂದರ ಕಾಂಪೌಂಡ್ನಲ್ಲಿದ್ದ ಸ್ಪಾಂಜ್ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡು ಘಟನೆ ಗಂಗಮ್ಮನ ಗುಡಿ ಬಳಿ ನಿನ್ನೆ ಮಧ್ಯಾಹ್ನ ನಡೆದಿತ್ತು. ಬಿಸಿಲಿನ ಝಳದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ತೆರಳಿ ಬೆಂಕಿ ನಂದಿಸಿವೆ. ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಇದನ್ನೂ ಓದಿ:ಕಿತ್ತೂರು ಬಳಿ ಹೆದ್ದಾರಿಯಲ್ಲಿ ಹೊತ್ತಿ ಉರಿದ ಲಾರಿ.. ಚಾಲಕ ಪ್ರಾಣಾಪಾಯದಿಂದ ಪಾರು - ವಿಡಿಯೋ