ಎಣ್ಣೆ ಕಿಕ್.. ನಡುರಸ್ತೆಯಲ್ಲೇ ಸಮವಸ್ತ್ರ ಕಳಚಿ ಬಿಸಾಡಿದ ಕಾನ್‌ಸ್ಟೇಬಲ್! - ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ಅಗರವಾಲ್
ಹರ್ದಾ(ಮಧ್ಯಪ್ರದೇಶ): ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತಮ್ಮ ಇಡೀ ಇಲಾಖೆಯನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ತಾನು ಧರಿಸಿದ್ದ ಪೊಲೀಸ್ ಸಮವಸ್ತ್ರವನ್ನು ರಸ್ತೆಯಲ್ಲಿ ತೆಗೆದು ಎಸೆದಿರುವ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಕುಡಿದ ಕಾನ್‌ಸ್ಟೆಬಲ್ ಸಮವಸ್ತ್ರವನ್ನು ಬಿಚ್ಚಿದ್ದಲ್ಲದೆ, ಇನ್ನೊಬ್ಬ ವ್ಯಕ್ತಿಯೊಂದಿಗೆ ಜಗಳವಾಡಿದ್ದಾನೆ. ಇದರ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಕುಡಿದು ಅಮಲಿನಲ್ಲಿ ತೇಲುತ್ತಿದ್ದ ಕಾನ್‌ಸ್ಟೇಬಲ್ ಹೆಸರು ಸುಶೀಲ್ ಮಾಂಡವಿ ಎಂದು ತಿಳಿದು ಬಂದಿದ್ದು. ಹರ್ದಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ಅಗರವಾಲ್ ಮಾಡಿದ ಕೃತ್ಯಕ್ಕೆ ಕಾನ್ಸ್ಟೇಬಲ್ನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Last Updated : Feb 3, 2023, 8:36 PM IST