ಹೊಸಕೋಟೆ: ಅಂಗಡಿ ಮೇಲೆ ಮುರಿದು ಬಿದ್ದ ಶಾಸಕರ ಹುಟ್ಟುಹಬ್ಬದ ಕಟೌಟ್ - ಹೊಸಕೋಟೆ ಪೊಲೀಸರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಕೆಇಬಿ ವೃತ್ತದ ಬಳಿ ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬ ಪ್ರಯುಕ್ತ ಬೃಹತ್ ಕಟೌಟ್ ನಿಲ್ಲಿಸಲಾಗಿತ್ತು. ಹುಟ್ಟುಹಬ್ಬ ಮುಗಿದು ವಾರ ಕಳೆದರೂ ಕಟೌಟ್ ತೆರವುಗೊಳಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಆದರೆ ಇಂದು ಅಂಗಡಿಗಳ ಮೇಲೆ ಬೃಹತ್ ಕಟೌಟ್ ಮುರಿದುಬಿದ್ದು ಅಂಗಡಿಯಲ್ಲಿದ್ದ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ರಸ್ತೆ ಬದಿಯಲ್ಲಿದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Last Updated : Feb 3, 2023, 8:35 PM IST