ರಸ್ತೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ: ಮಂಡ್ಯ ಎಸ್ಪಿ ಯತೀಶ್ ಎಚ್ಚರಿಕೆ - ಮಂಡ್ಯ ಎಸ್ಪಿ ಯತೀಶ್
Published : Jan 11, 2024, 5:21 PM IST
ಮಂಡ್ಯ :ಜಿಲ್ಲೆಯಲ್ಲಿಂದುರಸ್ತೆಗಿಳಿದು ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರಿಂದ ಜಾಗೃತಿ ಮೂಡಿಸಲಾಯಿತು. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಹಿನ್ನೆಲೆ ಮಂಡ್ಯದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಂಡ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಎಸ್ಪಿ ಎನ್ ಯತೀಶ್ ಅವರು ಚಾಲನೆ ನೀಡಿದರು.
ಮಂಡ್ಯದ ಸಂಜಯ್ ವೃತ್ತದಲ್ಲಿ ರಸ್ತೆ ಸುರಕ್ಷತಾ ಜಾಥಾಗೆ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಿ, ಕರಪತ್ರ ಹಂಚಿ ಸಂಚಾರ ನಿಯಮದ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಬಳಿಕ ಮಾತನಾಡಿದ ಅವರು, ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಸಾರ್ವಜನಿಕರಲ್ಲಿ ರಸ್ತೆ ನಿಯಮಗಳ ಪಾಲನೆ ಬಗ್ಗೆ ಅರಿವು, ಅವರ ಜೀವ ರಕ್ಷಣೆ, ಕುಟುಂಬದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ನಮ್ಮ ಪೊಲೀಸರು ನಗರದಲ್ಲಿ ಬೈಕ್ ಜಾಥಾ ಹಮ್ಮಿಕೊಂಡಿದ್ದಾರೆ ಎಂದರು.
ಕಳೆದ ವಾರ ಕೂಡ ಡ್ರಗ್ಸ್ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ. ರಸ್ತೆ ನಿಯಮಗಳ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿದ್ದೇವೆ. ನಾವು ಜಾಗೃತಿ ಮೂಡಿಸಲು ಕಾರ್ಯಕ್ರಮ ಮಾಡ್ತಿದ್ದೇವೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಜರುಗಿಸುತ್ತೇವೆ. ಬೈಕ್ ಮಾಡಿಫೈ ಮಾಡಿದ ಯುವಕರ ವಿರುದ್ದ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಸೈಲೆನ್ಸರ್ ಆಲ್ಟ್ರೇಷನ್ ಮಾಡಿದ ಬೈಕ್ ಸೀಜ್ ಮಾಡಿ ನಾಶ ಮಾಡಿದ್ದೇವೆ. ಡಾಕ್ಯುಮೆಂಟ್ ಇಲ್ಲದ ಗಾಡಿಗಳನ್ನ ಸೀಜ್ ಮಾಡಿ ಕೋರ್ಟ್ಗೆ ಪ್ರಡ್ಯೂಸ್ ಮಾಡಿದ್ದೇವೆ. ಯಾವುದೇ ರೀತಿಯ ಅಪಾಯಕಾರಿ ವಾಹನ ಚಾಲನೆ ಮಾಡಬೇಡಿ. ವಾಹನ ಸಂಚರಿಸುವ ವೇಳೆ ಎಚ್ಚರಿಕೆ ವಹಿಸಿ ಎಂದು ಎಸ್ಪಿ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಎಸ್ಪಿ ತಿಮ್ಮಯ್ಯ, ಸಂತೋಷ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ:ಪೊಲೀಸರು ತಡೆಯುತ್ತಿಲ್ಲವೆಂದು ಸಂಚಾರ ರಸ್ತೆ ನಿಯಮ ಉಲ್ಲಂಘಿಸಿದ್ರೆ ಜೋಕೆ! ಐಟಿಎಂಎಸ್ ಮೂಲಕ ಬೀಳುತ್ತೆ ದಂಡ