ಸಿಸಿ ರಸ್ತೆ ಕಾಮಗಾರಿ ಕೆಲಸಗಾರರ ಮೇಲೆ ಗೂಂಡಾಗಿರಿ- ವಿಡಿಯೋ - man assaulted on road workers
ಮುದ್ದೇಬಿಹಾಳ(ವಿಜಯಪುರ): ಮುದ್ದೇಬಿಹಾಳ ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಅನುದಾನದಡಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಇತ್ತೀಚೆಗೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಚಾಲನೆ ಕೊಟ್ಟಿದ್ದರು. ರಸ್ತೆ ಕೆಲಸಕ್ಕೆ ಸರಿಯಾಗಿ ಕಾಂಕ್ರೀಟ್ ಹಾಕುತ್ತಿಲ್ಲವೆಂದು ಕಾಲೋನಿ ನಿವಾಸಿ ನಾಗಪ್ಪ ಕುರಗೋಡಿ ಎಂಬಾತ ತಕರಾರು ತೆಗೆದು ಸೂಪರ್‌ವೈಸರ್ ಹಾಗೂ ಕೆಲಸಗಾರರಿಗೆ ಧಮ್ಕಿ ಹಾಕಿದ್ದಾನೆ. ಕೆಲಸಗಾರರನ್ನು ತಳ್ಳಾಡಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ.
Last Updated : Feb 3, 2023, 8:24 PM IST