ಕರ್ನಾಟಕ

karnataka

ಮೆಲೆಮಹದೇಶ್ವರ ಹುಂಡಿ ಎಣಿಕೆ

ETV Bharat / videos

ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 32 ದಿನ, ಎರಡೂವರೆ ಕೋಟಿ ಹಣ- ವಿಡಿಯೋ

By

Published : May 31, 2023, 11:20 AM IST

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಂಗಳವಾರ ಹುಂಡಿ ಎಣಕೆ ಕಾರ್ಯ ನಡೆಯಿತು. ಕಳೆದ ಒಂದು ತಿಂಗಳಲ್ಲಿ 2.53 ಕೋಟಿ ರೂ ಕಾಣಿಕೆ ಸಂಗ್ರಹವಾಗಿದೆ. ಬೆಟ್ಟದ ಬಸ್ ನಿಲ್ದಾಣ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಈ ಬಾರಿ ಅಮಾವಾಸ್ಯೆ, ವಿಶೇಷ ದಿನಗಳು, ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಸಾವಿರರು ಜನರು ದೇವಸ್ಥಾನಕ್ಕೆ ಆಗಮಿಸಿದ್ದರು. ಹೀಗಾಗಿ 32 ದಿನಗಳಲ್ಲಿ 2,53,58,519 ರೂ. ಸಂಗ್ರಹವಾಗಿದೆ. ಭಕ್ತರು 65 ಗ್ರಾಂ ಚಿನ್ನ ಹಾಗೂ 3.358 ಗ್ರಾಂ ಬೆಳ್ಳಿಯನ್ನು ಮಾದಪ್ಪನಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ.

ಏಪ್ರಿಲ್​ ತಿಂಗಳ ಕಾಣಿಕೆ:ಕಳೆದ ಏಪ್ರಿಲ್​ನಲ್ಲಿ ವಾಣಿಜ್ಯ ಸಂಕೀರ್ಣದಲ್ಲಿ ಮಲೆಮಹದೇಶ್ವರ ಹುಂಡಿ ಎಣಿಕೆ ಕಾರ್ಯ ನಡೆದಿತ್ತು. 2.28 ಕೋಟಿ ರೂ. ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿತ್ತು. 86 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿಯನ್ನು ಭಕ್ತರು ಹರಕೆ ರೂಪದಲ್ಲಿ ಅರ್ಪಿಸಿದ್ದರು.

ಇದನ್ನೂ ಓದಿ:ಉಘೇ ಮಾದಪ್ಪ... 30 ದಿನದಲ್ಲಿ ಮಲೆ ಮಾದಪ್ಪನಿಗೆ ಕೋಟಿ-ಕೋಟಿ ಕಾಣಿಕೆ

ABOUT THE AUTHOR

...view details