ಅಯೋಧ್ಯೆ ರಾಮ ಮಂದಿರಕ್ಕಾಗಿ ಸಿದ್ಧವಾದ 108 ಅಡಿ ಉದ್ದದ ಅಗರಬತ್ತಿಯ ಬೃಹತ್ ಮೆರವಣಿಗೆ - ವಿಡಿಯೋ
Published : Jan 2, 2024, 5:21 PM IST
ಮಹಿಸಾಗರ (ಗುಜರಾತ್):ಅಯೋಧ್ಯೆ ರಾಮ ಮಂದಿರಕ್ಕಾಗಿ 108 ಅಡಿ ಉದ್ದದ ಅಗರಬತ್ತಿ ಸಿದ್ಧಸಲಾಗಿದೆ. ದೊಡ್ಡ ಅಗರಬತ್ತಿಯನ್ನು ರಸ್ತೆ ಮೂಲಕ ಕಳುಹಿಸಲಾಗುತ್ತಿದೆ. ಈ ಅಗರಬತ್ತಿ ಲುಣವಾಡ ತಲುಪುತ್ತಿದ್ದಂತೆಯೇ ಭಕ್ತರು ಡೊಳ್ಳು, ಡಿಜೆ ಬಾರಿಸುವ ಮೂಲಕ ಭವ್ಯ ಸ್ವಾಗತ ಕೋರಿದರು.
ಈ ಅಗರಬತ್ತಿಯನ್ನು ನೋಡಲು ಸಾವಿರಾರು ಭಕ್ತರು ಸೇರಿದ್ದರು. ಬೃಹತ್ ಮೆರವಣಿಗೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಜಮಾಯಿಸಿದ್ದ ಶ್ರೀರಾಮನ ಭಕ್ತರು ಜೈ ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯುದ್ದಕ್ಕೂ ಶ್ರೀರಾಮನ ಪರವಾದ ಘೋಷಣೆಗಳು ಮೊಳಗಿದವು. ಬೃಹತ್ ಮೆರವಣಿಗೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಪೊಲೀಸರು ಸಂಚಾರ ದಟ್ಟಣೆ ತಪ್ಪಿಸಲು ಹರಸಾಹಸಪಟ್ಟರು.
51 ಇಂಚಿನ ಎತ್ತರದ ರಾಮ ಲಲ್ಲಾ ವಿಗ್ರಹ ಸ್ಥಾಪನೆಗೆ ನಿರ್ಧಾರ- ದೇವಾಲಯ ಟ್ರಸ್ಟ್: ಜನವರಿ 22 ರಂದು ರಾಮ ಮಂದಿರದ ಪ್ರತಿಷ್ಠಾಪನೆಗೆ ಅಯೋಧ್ಯೆ ಸಿದ್ಧವಾಗಿದೆ. ಐದು ವರ್ಷದ ರಾಮ ಲಲ್ಲಾನನ್ನು ಪ್ರತಿಬಿಂಬಿಸುವ 51 ಇಂಚು ಎತ್ತರದ ರಾಮನ ಮೂರ್ತಿಯನ್ನು ಪ್ರಾಣ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಅದ್ಭುತವಾಗಿದೆ ಬಾಲರಾಮನ ಮೂರ್ತಿ : ಶಿಲ್ಪಿ ಅರುಣ್ ಜೊತೆಗೆ ಮೂರ್ತಿ ಕೆತ್ತನೆಯಲ್ಲಿ ಭಾಗಿಯಾದ ಚಲುವರಾಜ್ ಸಂದರ್ಶನ