ತುಂಗಭದ್ರ ಜಲಾಶಯದ ಸದ್ಯದ ನೀರಿನ ಪ್ರಮಾಣ ಎಷ್ಟು? ಇಲ್ಲಿದೆ ಈಟಿವಿ ಭಾರತದ ಪ್ರತ್ಯಕ್ಷ ವರದಿ
Published : Oct 14, 2023, 4:29 PM IST
ಕೊಪ್ಪಳ:ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಇತ್ತ ಜಲಾಶಯದ ನೀರು ನಂಬಿ ಭತ್ತ ನಾಟಿ ಮಾಡಿರುವ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳ ರೈತರು ಆತಂಕಕ್ಕೀಡಾಗಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 100 ಟಿಎಂಸಿ ನೀರನ್ನು ತನ್ನ ಒಡಲಾಳದಲ್ಲಿ ಸಂಗ್ರಹಿಸಿಕೊಂಡಿದ್ದ ತುಂಗಭದ್ರಾ, ಈ ವರ್ಷ ಇದೀಗ 47 ಟಿಸಿಎಂಗೆ ಕುಸಿದಿದೆ. ಕಾರಣ ಇಲ್ಲಿನ ಜಲಾನಯನ ಪ್ರದೇಶದಲ್ಲಿ ಕಂಡು ಬಂದ ಮಳೆ ಕೊರತೆ. ಸಾಲದೆಂಬಂತೆ ಇದ್ದ ನೀರು ಸಹ ದಿನದಿಂದ ದಿನಕ್ಕೆ ಖಾಲಿಯಾಗುತ್ತಿದೆ. ಇದು ಬೆಳೆಗಳಿಗೆ ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ ಎಂಬ ಸಂಶಯ ಹುಟ್ಟುಹಾಕಿದೆ. ತುಂಗಭದ್ರಾ ಜಲಾಶಯ ನಿರ್ಮಾಣವಾಗಿ 75 ವರ್ಷ ಕಳೆದರೂ ಇದುವರೆಗೂ ಮೊದಲ ಬೆಳೆಗೆ ನೀರಿನ ಕೊರತೆ ಆಗಿರಲಿಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ನೀರಿನ ಕೊರತೆ ಕಂಡು ಬರುತ್ತಿದೆ. ನೀರಿನ ಕೊರತೆ ಸೇರಿದಂತೆ ಸದ್ಯದ ಒಳ ಹರಿವು ಹೇಗಿದೆ ಎಂಬುದರ ಕುರಿತು ಈಟಿವಿ ಭಾರತದ ಪ್ರತ್ಯಕ್ಷ ವರದಿ ಇಲ್ಲಿದೆ.
ಇದನ್ನೂ ಓದಿ:ಧಾರವಾಡ: ಹಸಿರು ಬರ, ಹಾನಿ ಪರಿಶೀಲಿಸಿದ ಕೇಂದ್ರ ತಂಡ; ಮಳೆ ಕೊರತೆಯಿಂದ ಶೇ.91ರಷ್ಟು ಬೆಳೆ ನಷ್ಟ- ಡಿಸಿ