ಕರ್ನಾಟಕ

karnataka

ಜೋಡಿ ಚಿರತೆ

ETV Bharat / videos

ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಸನ್ನಿಧಿಯಲ್ಲಿ ಜೋಡಿ ಚಿರತೆ ದರ್ಶನ - ಈಟಿವಿ ಭಾರತ್​ ಕನ್ನಡ ನ್ಯೂಸ್

By

Published : May 16, 2023, 6:53 PM IST

ಚಾಮರಾಜನಗರ :ಪ್ರಸಿದ್ಧ ಪ್ರವಾಸಿ ತಾಣವಾದ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವಾಗ ಎರಡು ಚಿರತೆ ದರ್ಶನ ಕೊಟ್ಟಿವೆ. ಕೆಎಸ್ಆರ್​ಟಿ​ಸಿ ಬಸ್ ಮೂಲಕ ಪ್ರವಾಸಿಗರು ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ರಸ್ತೆ ತಿರುವಿನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ರಸ್ತೆಯ ತಡೆಗೋಡೆ ಪಕ್ಕದಲ್ಲಿ ಹೋಗುತ್ತಿರುವ ದೃಶ್ಯವನ್ನು ಪ್ರವಾಸಿಗರೊಬ್ಬರು ಸೆರೆ ಹಿಡಿದಿದ್ದಾರೆ. 

ಇನ್ನು ಜೋಡಿ ಚಿರತೆ ಕಂಡು ಪ್ರವಾಸಿಗರು ರೋಮಾಂಚಿತರಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಇನ್ನು ಮೈಸೂರು ಭಾಗದಲ್ಲೂ ಸಹ ಚಿರತೆಗಳ ಹಾವಳಿ ಜೋರಾಗಿದ್ದು, ಚಿರತೆಗಳ ದಾಳಿಯಲ್ಲಿ ಐದಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಈ ವೇಳೆ ಚಿರತೆಗಳನ್ನು ಹಿಡಿಯುವಂತೆ ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರಿದ್ದರು. 

ಬಳಿಕ ಜಿಲ್ಲಾಧಿಕಾರಿಗಳು ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ಕಬ್ಬಿನ ಗದ್ದೆಯನ್ನು ಕಟಾವು ಮಾಡಲು ಅದೇಶವನ್ನು ಹೊರಡಿಸಿದ್ದರು. ಆದರೂ ಚಿರತೆಗಳ ದಾಳಿಯಂತೂ ಕಡಿಮೆ ಆಗಿರಲಿಲ್ಲ. ಇತ್ತೀಚಿಗೆ ಚಿರತೆಗಳ ಹಾವಳಿ ಕಡಿಮೆ ಆಗಿದೆ.    

ಇದನ್ನೂ ಓದಿ :ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ: ವಿಡಿಯೋ  

ABOUT THE AUTHOR

...view details