ಅಪರಾಧ ತಡೆಯಲು ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ.. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಮೇಲೆ ರೋಡ್ ರೋಲರ್ ಸವಾರಿ- ವಿಡಿಯೋ - ಮಧ್ಯಪ್ರದೇಶ ಚುನಾವಣೆ
ಇಂದೋರ್ (ಮಧ್ಯ ಪ್ರದೇಶ):ರಾಜ್ಯದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮದ್ದು ಗುಂಡುಗಳ ಆರ್ಭಟ ಜೋರಾಗಿದೆ. ಅಲ್ಲಿನ ಪೊಲೀಸ್ ಪಡೆ ಯಾವುದೇ ಅನಾಹುತ ಜರುಗದಂತೆ ತಡೆಯಲು ಅಕ್ರಮವಾಗಿ ಸಂಗ್ರಹಿಸಿಟ್ಟ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ. ಅಪಾರ ಸಂಖ್ಯೆಯಲ್ಲಿದ್ದ ಅಕ್ರಮ ಶಸ್ತ್ರಾಸ್ತ್ರಗಳನ್ನು ದಾತಿಯಾದಲ್ಲಿನ ಪೊಲೀಸ್ ಕಂಟ್ರೋಲ್ ರೂಂ ಮುಂಭಾಗ ಪೊಲೀಸರು ನಾಶಪಡಿಸಿದರು.
ಮುಂಬರುವ ರಾಜ್ಯ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯದ ಅನುಮತಿಯೊಂದಿಗೆ ಪೊಲೀಸ್ ಠಾಣೆ ಮುಂಭಾಗ ಸುಮಾರು 1,300 ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ. ಮುಂದೆಯೂ ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಡಾಟಿಯಾ ಎಸ್ಪಿ ಪ್ರದೀಪ್ ಶರ್ಮಾ ತಿಳಿಸಿದರು.
ಚುನಾವಣೆ ಭವಿಷ್ಯ:ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ದಾಖಲೆಯ ನಾಲ್ಕನೇ ಬಾರಿಗೆ ಅಧಿಕಾರ ಹಿಡಿಯಲಿದೆ ಎಂದು ಟೈಮ್ಸ್ ನೌ, ಸಿಎನ್‌ಎಕ್ಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ವರದಿಯಾಗಿದೆ. ಆದರೆ, ಈಗಿನಕ್ಕಿಂತಲೂ ಕಡಿಮೆ ಸೀಟುಗಳನ್ನು ಪಕ್ಷ ಗೆಲುವು ಸಾಧಿಸಲಿದೆ ಎಂದಿದೆ.
ಆಡಳಿತಾರೂಢ ಬಿಜೆಪಿ ಒಟ್ಟು 230 ಸ್ಥಾನಗಳಲ್ಲಿ 122 ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ 95ರಲ್ಲಿ ಗೆದ್ದು ಎರಡನೇ ಸ್ಥಾನ ಪಡೆಯಲಿದೆ ಎಂದಿದೆ. ಮಾಯಾವತಿಯವರ ಬಿಎಸ್ಪಿ 3, ಜಿಜಿಪಿ, ಎಸ್ಪಿ, ಎಡರಂಗ ಮತ್ತು ಸ್ವತಂತ್ರರು ಸೇರಿದಂತೆ 10 ಸ್ಥಾನಗಳನ್ನು ಪಡೆಯಲಿದೆ ಎಂದಿದೆ ಸಮೀಕ್ಷೆ.