ಉತ್ತರಾಖಂಡದಲ್ಲಿ ಗುಡ್ಡ ಕುಸಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.. - ಅಲ್ಮೋರಾ ಜಿಲ್ಲೆಯಲ್ಲಿ ಗುಡ್ಡ ಕುಸಿತ
ಉತ್ತರಾಖಂಡ:ಉತ್ತರಾಖಂಡದಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತದ ಘಟನೆಗಳು ಹೆಚ್ಚಾಗುತ್ತಿವೆ. ಅಲ್ಮೋರಾ ಜಿಲ್ಲೆಯಲ್ಲಿ ಗುಡ್ಡ ಕುಸಿತದ ವಿಡಿಯೋ ವೀಕ್ಷಿಸಿದರೆ, ಎದೆ ಝಲ್ ಎನಿದಂತೆ ಆಗುತ್ತದೆ. ಹೌದು, ಗುಡ್ಡವೊಂದು ಕುಸಿದು ರಸ್ತೆ ಮೇಲೆ ಬೀಳುತ್ತಿರುವ ದೃಶ್ಯ ವಾಹನ ಸವಾರರಲ್ಲಿ ಭಯವನ್ನುಂಟು ಮಾಡಿದೆ. ಗುಡ್ಡ ಕುಸಿತದ ವೇಳೆ ಯಾವುದೇ ಅವಘಡ ಸಂಭವಿಸಿಲ್ಲ. ಅದೇ ಸಮಯದಲ್ಲಿ, ಚಾಲಕ ತಕ್ಷಣವೇ ಜಾಗೃತಿವಹಿಸಿ ಬಸ್ ಅನ್ನು ರಸ್ತೆಯ ಮಧ್ಯದಲ್ಲೇ ನಿಲ್ಲಿಸಿದ್ದಾನೆ. ಇದರಿಂದ ಅನೇಕ ಜನರ ಪ್ರಾಣ ಉಳಿದಿದೆ. ಇನ್ನು ಬೈಕ್ ಸವಾರನೊಬ್ಬ ಗುಡ್ಡ ಕುಸಿತಕ್ಕೂ ಕೆಲವೇ ನಿಮಿಷಗಳ ಮುನ್ನ, ಅದೇ ರಸ್ತೆ ದಾಟಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಅಲ್ಮೋರಾ ಜಿಲ್ಲೆಯ ಕ್ವಾರ್ಬ್ ಸೇತುವೆಯ ಬಳಿ ಸೆರೆ ಹಿಡಿಯಲಾಗಿದೆ. ಭಾರಿ ಮಳೆಯಿಂದ ಗುಡ್ಡ ಕುಸಿದು ಬಿದ್ದಿದೆ. ಗುಡ್ಡದ ಮಣ್ಣು ಹಾಗೂ ಕಲ್ಲು ರಸ್ತೆ ಮೇಲೆಯೇ ಬಿದ್ದಿದ್ದು, ಸಂಚಾರಕ್ಕೆ ತೊಂದರೆಯಾಗಿದೆ. ಪೊಲೀಸ್ ಇಲಾಖೆ ಮತ್ತು ಆಡಳಿತ ಮಂಡಳಿ ಸ್ಥಳಕ್ಕೆ ಆಗಮಿಸಿ ರಸ್ತೆಯಲ್ಲಿ ಬಿದ್ದಿರುವ ಮಣ್ಣು, ಕಲ್ಲು ತೆರವುಗೊಳಿಸುವ ಪ್ರಕ್ರಿಯೆ ಚುರುಕುಗೊಳಿಸಿದೆ.
ಇದನ್ನೂ ಓದಿ:ಪಂಜಾಬ್ನಲ್ಲಿ ಭೀಕರ ಪ್ರವಾಹ.. ಹಲವು ಪ್ರದೇಶಗಳು ಜಲಾವೃತ: ವಿಡಿಯೋ