ಕರ್ನಾಟಕ

karnataka

ರಾಮನಗರದಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ ಕೊರತೆ: ಪ್ರಯಾಣಿಕರ ಆಕ್ರೋಶ-ವಿಡಿಯೋ

By ETV Bharat Karnataka Team

Published : Jan 18, 2024, 12:57 PM IST

ಪ್ರತಿಭಟನೆ

ರಾಮನಗರ:ರಾಮನಗರದಿಂದ ಬೆಂಗಳೂರಿಗೆ ತೆರಳಲು ಸಮರ್ಪಕವಾಗಿ ಕೆಎಸ್​ಆರ್​ಟಿಸಿ ಬಸ್​​ ಸೌಲಭ್ಯವಿಲ್ಲ ಎಂದು ಆಕ್ರೋಶಗೊಂಡ ನೂರಕ್ಕೂ ಹೆಚ್ಚು ಪ್ರಯಾಣಿಕರು ಬಸ್​ ತಡೆದು ಪ್ರತಿಭಟನೆ ನಡೆಸಿದ್ದಾರೆ. ರಾಮನಗರ ಬಸ್ ನಿಲ್ದಾಣದ ಮುಂಭಾಗ ಇಂದು ಬೆಳಿಗ್ಗೆ 7 ಗಂಟೆಯಿಂದ ಬೆಂಗಳೂರಿಗೆ ಪ್ರಯಾಣಿಸಲು ಕಾದು ನಿಂತಿದ್ದ ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕರು ತಾಳ್ಮೆ ಕಳೆದುಕೊಂಡು ಕೋಪಗೊಂಡರು. ಬಸ್‌ಗಳನ್ನು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದರು.

"ಪ್ರತಿನಿತ್ಯ ಇದೇ ಸಮಸ್ಯೆ. ರಾಮನಗರಕ್ಕೆ ಮೈಸೂರು ಕಡೆಯಿಂದ ಬರುವ ಬಸ್‌ಗಳು ಕಿಕ್ಕಿರಿದು ತುಂಬಿರುತ್ತವೆ. ರಾಮನಗರದಲ್ಲಿ ಬಸ್ ಹತ್ತಲು ಸಾಧ್ಯವಾಗದ ಪರಿಸ್ಥಿತಿ ಇದೆ. ಸಾರಿಗೆ ಇಲಾಖೆ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಶಕ್ತಿ ಯೋಜನೆ ಜಾರಿಯಾದ ನಂತರ ಬಸ್​ಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಜನರು ಪರದಾಡುವಂತಾಗಿದೆ" ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಪೊಲೀಸರು ಮಧ್ಯಪ್ರವೇಶಿಸಿ ಪ್ರಯಾಣಿಕರನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ‌ ಜರುಗಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಿದರು.

ಇದನ್ನೂ ಓದಿ:ಬೆಂಗಳೂರಲ್ಲಿ ಬಿಲ್ಡರ್ ಅಪಹರಿಸಿ ಕಿರುಕುಳ; 8 ಜನರ ವಿರುದ್ಧ ಎಫ್ಐಆರ್

ABOUT THE AUTHOR

...view details