ಗಣೇಶ ವಿಸರ್ಜನೆ ವೇಳೆ ಯುವತಿಯರೊಂದಿಗೆ ಸ್ಟೆಪ್ ಹಾಕಿದ ಜೆಡಿಎಸ್ ಮಹಿಳಾ ಅಧ್ಯಕ್ಷೆ - ಈಟಿವಿ ಭಾರತ ಕನ್ನಡ
ಕೋಲಾರ: ಗಣಪತಿ ವಿಸರ್ಜನೆ ವೇಳೆ ಜೆಡಿಎಸ್ ಅಧ್ಯಕ್ಷೆ ಹಾಗೂ ಮಹಿಳೆಯರು ಭರ್ಜರಿ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದರು. ಕೋಲಾರ ನಗರದ ಹಳೇಪೇಟೆಯಲ್ಲಿ ಸಾಯಿ ಗಜಾನನ ಗೆಳೆಯರ ಬಳಗದ ವತಿಯಿಂದ ಗಣೇಶ ವಿಸರ್ಜನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಎಂಜಿ ರಸ್ತೆಯಲ್ಲಿ ಗಣೇಶ ಮೆರವಣಿಗೆ ಸಾಗುತ್ತಿದ್ದ ವೇಳೆ ಕೋಲಾರ ಜೆಡಿಎಸ್ ಅಧ್ಯಕ್ಷೆ ಹಾಗೂ ಕೋಲಾರ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಕುರ್ಕಿ ರಾಜೇಶ್ವರಿ ಅವರು, ಡಿಜೆ ಹಾಗೂ ತಮಟೆಗೆ ಕುಣಿದು ಕುಪ್ಪಳಿಸಿದರು. ಇನ್ನು ಇವರೊಂದಿಗೆ ಯುವತಿಯರು ಹಾಗೂ ಮಹಿಳೆಯರು ಸಹ ಸ್ಟೆಪ್ಸ್ ಹಾಕಿದ್ದು, ಎಲ್ಲರ ಗಮನ ಸೆಳೆದ್ರು. ಪುರುಷ ರಾಜಕಾರಣಿಗಳು ಇಂತಹ ಮೆರವಣಿಗಳಲ್ಲಿ ಕುಣಿಯುವುದು ಸರ್ವೇ ಸಾಮಾನ್ಯ ಆದರೆ ಮಹಿಳಾ ರಾಜಕಾರಣಿಗಳೂ ಸಹ ನಾವೇನೂ ಕಡಿಮೆ ಇಲ್ಲ ಎಂದು ಡಿಜೆ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.
Last Updated : Feb 3, 2023, 8:29 PM IST